ಇಂದಿಗೂ ತಪ್ಪದೆ ಮತ ಚಲಾಯಿಸುತ್ತಿರುವ ಸ್ವತಂತ್ರ ಭಾರತದ ಮೊದಲ ಮತದಾರ

Update: 2016-01-02 12:45 GMT


 ಶಿಮ್ಲಾ,ಜ.2: ಹೆಸರು ಶ್ಯಾಮ್ ಸರಣ್ ನೇಗಿ. ಹಿಮಾಚಲ ಪ್ರದೇಶದ ಕಿನ್ನಾವುರ್ ಜಿಲ್ಲೆಯ ಕಲ್ಪಾ ನಿವಾಸಿ ಇವರು ಸ್ವತಂತ್ರ ಭಾರತದ ಮೊದಲ ಮತದಾರ. ವಯಸ್ಸು 98 ಆಗಿದ್ದರೂ ಈ ವರೆಗೆ ಎಲ್ಲ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದಾರೆ.

 ನಿವೃತ್ತ ಶಾಲಾ ಶಿಕ್ಷಕ ಶ್ಯಾಮ್ ಸರಣ್ 1951, ಅಕ್ಟೋಬರ್ 25ರಂದು ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಮೊದಲ ಮತ ಚಲಾಯಿಸುವ ಮೂಲಕ ಇತಿಹಾಸ ಬರೆದಿದ್ದರು.ಅಂದಿನಿಂದ ಇಂದಿನ ತನಕ ಎಲ್ಲ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲೂ ಅವರು ಮತ ಚಲಾಯಿಸಿದ್ದರು. ಶುಕ್ರವಾರ ಹಿಮಾಚಲ ಪ್ರದೇಶದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಲು ಕೊರೆಯುವ ಚಳಿಯಲ್ಲೂ ಹೆಚ್ಚಿನ ಉತ್ಸಾಹದಿಂದಲೇ ನೇಗಿ ಆಗಮಿಸಿದ್ದರು. ಕಿನ್ನಾವುರ್ ಜಿಲ್ಲೆಯ ಕಲ್ಪಾ ನಿವಾಸಿ ನೇಗಿ ಅವರಿಗೆ ಮತಗಟ್ಟಗೆ ಬರುವುದಕ್ಕಾಗಿ ಜಿಲ್ಲಾಡಳಿತವು ವಾಹನದ ವ್ಯವಸ್ಥೆ ಮಾಡಿಕೊಟ್ಟಿತ್ತು.

 ತನ್ನ ಮನೆಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಮತಗಟ್ಟೆಗೆ ಅವರು ಎರಡನೆ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಲು ತನ್ನ ಕುಟುಂಬದ ಸದಸ್ಯರೊದಿಗೆ ಆಗಮಿಸಿದಾಗ ಅವರನ್ನು ಮತಗಟ್ಟೆಯ ಬಳಿ ಸ್ವಾಗತಿಸಲು ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿ ಹೂಹಾರ ಹಿಡಿದು ಕಾಯುತ್ತಿದ್ದರು.

2010ರಲ್ಲಿ ಭಾರತದ ಚುನಾವಣಾ ಆಯೋಗದ ವಜ್ರ ಮಹೋತ್ಸವ ವರ್ಷಾಚರಣೆಯ ಸಂದರ್ಭದಲ್ಲಿ ಭಾರತದ ಮುಖ್ಯ ಚುನಾವಣಾಧಿಕಾರಿ ನವೀನ್ ಚಾವ್ಲಾ ಅವರು ಶ್ಯಾಮ್ ಸರಣ್ ನೇಗಿ ಅವರನ್ನು ಹುಟ್ಟೂರಲ್ಲಿ ಸನ್ಮಾನಿಸಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News