×
Ad

ಉದ್ಯೋಗಸ್ಥ ಮುಸ್ಲಿಮರ ಪ್ರಮಾಣ ಕೇವಲ 33%

Update: 2016-01-04 23:48 IST

ಹೊಸದಿಲ್ಲಿ, ಜ.4: ಭಾರತೀಯ ಮುಸ್ಲಿಮರಲ್ಲಿ ಉದ್ಯೋಗಸ್ಥ ಜನರ ಪ್ರಮಾಣ ಸುಮಾರು 33%. ದೇಶದ ಇತರ ಧಾರ್ಮಿಕ ಸಮುದಾಯಗಳಿಗೆ ಹೋಲಿಸಿದರೆ ಇದು ಕನಿಷ್ಠ. ಇದು ರಾಷ್ಟ್ರೀಯ ಸರಾಸರಿ 40 ಶೇಕಡಕ್ಕಿಂತ ಕಡಿಮೆಯಾಗಿದೆ.

ಉದ್ಯೋಗಸ್ಥ ಜೈನರು ಮತ್ತು ಸಿಖ್ಖರ ಪ್ರಮಾಣ ತಲಾ 36%. ಇಪ್ಪತ್ತನೆ ಶತಮಾನದಲ್ಲಿ ಮತಾಂತರಗೊಂಡಿರುವ ದಲಿತರೇ ಹೆಚ್ಚಾಗಿರುವ ಬೌದ್ಧ ಧರ್ಮೀಯರಲ್ಲಿ ಉದ್ಯೋಗಸ್ಥ ಜನರ ಪ್ರಮಾಣ 43%. ಇದು ಎಲ್ಲ ಧಾರ್ಮಿಕ ಸಮುದಾಯಗಳಿಗಿಂತ ಹೆಚ್ಚು. ಹಿಂದೂಗಳಲ್ಲಿ ಈ ಪ್ರಮಾಣ 41%. 2011ರ ಜನಗಣತಿ ಅಂಕಿಅಂಶವು ನೌಕರ ಸಮುದಾಯದ ಧರ್ಮಾಧಾರಿತ ವಿವರಗಳನ್ನು ಒದಗಿಸಿದೆ. ಈ ಅಂಕಿಅಂಶಗಳು 2001ರ ಜನಗಣತಿಗಿಂತ ಹೆಚ್ಚೇನೂ ಬದಲಾಗಿಲ್ಲ.
ಕೆಲವು ಸಮುದಾಯಗಳಲ್ಲಿ ಉದ್ಯೋಗಸ್ಥರ ಪ್ರಮಾಣ ಕಡಿಮೆಯಾಗಿರುವುದಕ್ಕೆ ಪ್ರಮುಖ ಕಾರಣ ಆ ಸಮುದಾಯದಲ್ಲಿ ಉದ್ಯೋಗಸ್ಥ ಹೆಂಗಸರ ಪ್ರಮಾಣ ಕಡಿಮೆಯಾಗಿರುವುದು. ಮುಸ್ಲಿಮರು ಮತ್ತು ಜೈನರಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಕೇವಲ 15%. ಜೈನರಲ್ಲಿ ಇದು ಇನ್ನೂ ಕಡಿಮೆ- 12%.
ಹಿಂದೂಗಳಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ 27% ಹಾಗೂ ಕ್ರೈಸ್ತರಲ್ಲಿ ಈ ಪ್ರಮಾಣ 31. ಬೌದ್ಧ ಮಹಿಳೆಯರು ಉದ್ಯೋಗಸ್ಥ ಪ್ರಮಾಣ 33%.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News