×
Ad

ತ್ರಿಪುರ ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ

Update: 2016-01-05 00:30 IST

ಅಗರ್ತಲ, ಜ. 4: ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹೆಸರಿನಲ್ಲಿ ತೆರೆಯಲಾದ ನಕಲಿ ಫೇಸ್‌ಬುಕ್ ಖಾತೆಯ ಬಗ್ಗೆ ತ್ರಿಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. 2014ರಲ್ಲೂ ಇಂಥದೇ ಘಟನೆ ನಡೆದಿದ್ದು, ಪೊಲೀಸರು ಮೊಕದ್ದಮೆ ದಾಖಲಿಸುತ್ತಿರುವುದು ಇದು ಎರಡನೆ ಬಾರಿಯಾಗಿದೆ.

ಈ ನಡುವೆ, ತಾನು ಯಾವುದೇ ಫೇಸ್‌ಬುಕ್ ಅಥವಾ ಇಮೇಲ್ ಖಾತೆಯನ್ನಾಗಲಿ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಅದೂ ಅಲ್ಲದೆ, ತನ್ನ ಹೆಸರಿನಲ್ಲಿ ಯಾವುದೇ ಸಾಮಾಜಿಕ ಜಾಲ ತಾಣ ಖಾತೆ ತೆರೆಯಲು ಯಾರಿಗೂ ಅನುಮತಿ ನೀಡಿಲ್ಲ ಎಂದಿದ್ದಾರೆ.

ಆರಂಭದಲ್ಲಿ ಸಂಸ್ಥೆಯು ಉಚಿತ ತರಬೇತಿ ನೀಡುತ್ತಿತ್ತು. ಈಗ ಅದು ಯೋಗ ತರಬೇತಿಗಾಗಿ ಶುಲ್ಕ ಪಡೆದುಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News