ಲಡಾಕ್‌ನಿಂದ ಕಾಶ್ಮೀರಕ್ಕೆ 10,050 ಕೋಟಿ. ರೂ. ವೆಚ್ಚದ ಸುರಂಗ ಮಾರ್ಗ
Update: 2016-01-05 11:12 IST
ಶ್ರೀನಗರ, ಜ.5:ಲಡಾಖ್‌ನಿಂದ ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ನಿರ್ಮಿಸಲು ಸರಕಾರ ಮುಂಬೈನ ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಿಕೊಟ್ಟಿದೆ.
10,050 ಕೋಟಿ. ರೂ. ವೆಚ್ಚದ 14.08 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ನಿರ್ಮಿಸಲು ಮುಂಬೈನ ಐಆರ‍್ಬಿ ಇನ್‌ಫ್ರಾಸ್ಟ್ರೆಕ್ಚರ‍್ ಡೆವೆಲಪ್ಪರ‍್ಸ್ ಸಂಸ್ಥೆಗೆ ಗುತ್ತಿಗೆಯನ್ನು ವಹಿಸಿಕೊಡಲಾಗಿದೆ.
ಝೊಜಿಲಾ ಸುರಂಗ ಮಾರ್ಗವು ಶ್ರೀನಗರ -ಕಾರ್ಗಿಲ್ -ಲೆಹ್ ಹೈವೆಯಲ್ಲಿ ನಿರ್ಮಾಣಗೊಳ್ಳಲಿದೆ. ಆಗ್ನೇಯ ಏಷ್ಯಾದಲ್ಲೇ ಇದು ಅತ್ಯಂತ ಉದ್ದದ ಸುರಂಗ ಮಾರ್ಗ ಎನಿಸಿಕೊಳ್ಳಲಿದೆ. ಭಾರತದಲ್ಲಿ ಇದು ಭಾರೀ ವೆಚ್ಚದ ಕಾಮಗಾರಿಯಾಗಿದೆ.