×
Ad

ವಾಯುನೆಲೆ ಮೇಲೆ ದಾಳಿಯಲ್ಲಿ ಪಾಕ್‌ನ ಕೈವಾಡ : ಸಚಿವ ಪರಿಕ್ಕರ್

Update: 2016-01-05 17:16 IST


ಹೊಸದಿಲ್ಲಿ ,ಜ.5: ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿದ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳು ಪಾಕ್‌ನಲ್ಲಿ ತಯಾರಿಯಾಗಿದ್ದವು. ದಾಳಿಯ ಹಿಂದೆ ಪಾಕ್‌ನ ಕೈವಾಡ ಸ್ಪಷ್ಟಗೊಂಡಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
   ಸುದ್ದಿಗೊಷ್ಠಿಯಲ್ಲಿ ಇಂದು ಮಾತನಾಡಿದ ಅವರು ಉಗ್ರರು ಭಾರೀ ಪ್ರಮಾಣದಲ್ಲಿ ಸ್ಫೋಟಕ ತಂದಿದ್ದರು. ಎಕೆ -47, ಗ್ರೇನೆಡ್, 40-50 ಕೆ.ಜಿ.ಗುಂಡುಗಳು ಅವರಲ್ಲಿತ್ತು.
        
  ಸೇನಾ ಕಾರ್ಯಾಚರಣೆ ಅತ್ಯಂತ ಕಠಿಣವಾಗಿತ್ತು.ಅತ್ಯಂತ ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿದೆ. ನಾಳೆಯವರೆಗೂ ಕಾರ್ಯಾಚರಣೆ ಮುಂದುವರಿಯಲಿದೆ. ಭಾರತೀಯ ಸೇನೆ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಅತ್ಯಾಹುತಿ ದಾಳಿಗೆ ಬಂದಿದ್ದ ೆ. ಒಟ್ಟು 6 ಮಂದಿ ಉಗ್ರರನ್ನು ಕೊಲ್ಲಲಾಗಿದೆ. ಮೃತದೇಹವನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗುವುದು.ಎನ್‌ಎಐ ಪ್ರಕರಣದ ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಉಗ್ರರು ಹೇಗೆ ವಾಯುನೆಲೆ ಪ್ರವೇಶಿಸದರೆಂದು ಗೊತ್ತಾಗಲಿದೆ. ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ವಾಯುನೆಲೆಯಲ್ಲಿ 3 ಸಾವಿರ ಮಂದಿ ನಾಗರಿಕರು ವಾಸಿಸುತ್ತಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿಲ್ಲ. ಕಾರ್ಯಾಚರಣೆ ನಡೆದದ್ದು ಕೇವಲ 28 ಗಂಟೆ ಮಾತ್ರ, ನಂತರ ನಡೆದಿರುವುದು ಕೂಂಬಿಂಗ್ ಎಂದರು ಪರಿಕ್ಕರ್.
   ಹುತಾತ್ಮ ಯೋಧರ ಕುಟುಂಬದ ಓರ್ವ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಲಾಗುವುದು 25 ಲಕ್ಷ ರೂ. ಪರಿಹಾರ ನೀಡಲಿದೆ. ರಾಜ್ಯ ಸರಕಾರವು ಪರಿಹಾರ ಘೋಷಿಸಿದೆ ಎಮದು ಅವರು ಮಾಹಿತಿ ನೀಡಿದರು.
 ಪ್ರಧಾನಿ ಮಾತುಕತೆ: ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ತನಿಖೆಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು  ಪರಿಕ್ಕರ್ ತಿಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News