×
Ad

ಸಂಜಯ್‌ ದತ್‌ ಫೆ. 25ರಂದು ಜೈಲಿನಿಂದ ಬಿಡುಗಡೆ

Update: 2016-01-06 14:43 IST

 
ಪುಣೆ , ಜ.6: ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ  ಯರವಾಡ ಜೈಲಿನಲ್ಲಿ ಐದು ವರ್ಷಗಳ ಸಜೆ ಅನುಭವಿಸುತ್ತಿರುವ ಬಾಲಿವುಡ್‌ ನಟ ಸಂಜಯ್ ದತ್‌ ಅವರು ಸನ್ನಡೆತೆಯ ಆಧಾರದಲ್ಲಿ 2016ರ ಫೆ. 25ರಂದು  ಜೈಲಿನಿಂದ ಬಿಡುಗಡೆಗೊಳ್ಳಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಐದು ವರ್ಷಗಳ ಜೈಲುವಾಸ ಅವಧಿ ಮುಗಿಯಲು ೧೦೩ ದಿನಗಳ ಮುಂಚಿತವಾಗಿಯೇ ಸಂಜಯ್ ದತ್‌ ಜೈಲಿನಿಂದ ಹೊರಬರಲಿದ್ದಾರೆ.
ಟಾಡಾದ ಅಡಿ ದಾಖಲಾಗಿದ್ದ ಭಯೋತ್ಪಾದನಾ ಚಟುವಟಿಕೆಗಳ ಆರೋಪದಿಂದ ಮುಕ್ತರಾಗಿದ್ದರೂ, ದತ್‌ ಅವರನ್ನು 1993ರ ಸರಣಿ ಸ್ಫೋಟ ಪ್ರಕರಣದಲ್ಲಿ  ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ  ದೋಷಿ ಎಂದು ತೀರ್ಪು ನೀಡಲಾಗಿತ್ತು.ಸುಪ್ರೀಂಕೋರ್ಟ್‌  2013ರ ಮಾರ್ಚ್‌ನಲ್ಲಿ ಈ ತೀರ್ಪನ್ನು ಎತ್ತಿಹಿಡಿದಿತ್ತು.
ಸುಪ್ರೀಂ ಕೋರ್ಟ್‌ ಆದೇಶದ ನಂತರ 2013ರ ಮೇ 16ರಂದು ಅವರು ಶರಣಾಗಿದ್ದರು.ದತ್‌ ಅವರು 18 ತಿಂಗಳು ವಿಚಾರಣಾಧೀನ ಕೈದಿಯಾಗಿದ್ದರು.5ವರ್ಷದಲ್ಲಿ ಈ ಅವಧಿಯನ್ನು ಕಳೆದು ಅವರು 42 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News