2015ರ ಡಿಸೆಂಬರ್ 115ವರ್ಷಗಳಲ್ಲೇ ಅತ್ಯಂತ ವಿಶಿಷ್ಟ !

Update: 2016-01-06 14:57 GMT


ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ಕಳೆದ ವರ್ಷದ ಡಿಸೆಂಬರ್ ಕಳೆದ 115 ವರ್ಷಗಳಲ್ಲೇ ಅತ್ಯಂತ ವಿಶಿಷ್ಟವಾದುದು. ಏಕೆಂದರೆ ಅದು ಅಷ್ಟು ವರ್ಷಗಳಲ್ಲೇ  ಅತ್ಯಂತ ಬಿಸಿಯಾಗಿದ್ದ ಡಿಸೆಂಬರ್ ! 
2008,2009,2012 ಹಾಗು 2006 ರಲ್ಲೂ ಡಿಸೆಂಬರ್ ಸಾಕಷ್ಟು ಬಿಸಿಯಿದ್ದವಾದರೂ 2015 ರ ಡಿಸೆಂಬರ್ ಈ ಎಲ್ಲ ವರ್ಷಗಳ ದಾಖಲೆಯನ್ನು ಮುರಿದು ಹಾಕಿದೆ. ಈ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಜಾಗತಿಕ ಹವಾಮಾನಕ್ಕೆ ಅನುಗುಣವಾಗಿಯೇ ಇದೆ. ಜಾಗತಿಕ ತಾಪಮಾನ ಏರಿಕೆ ಹಾಗು ಪೆಸಿಫಿಕ್ ಸಾಗರದಲ್ಲಿ ಎಲ್ ನೀನೋ ಪ್ರಭಾವದಿಂದಾಗಿ ಈ ಹೆಚ್ಚಳ ಆಗಿದೆ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ. ಭಾರತೀಯ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಕೇಂದ್ರದ ಮುಖ್ಯಸ್ಥ ಡಾ . ಡಿ. ಎಸ್ . ಪೈ ಅವರ ಪ್ರಕಾರ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಎಲ್ ನೀನೋ ದ ಪುನರಾವರ್ತನೆ ಪ್ರಮಾಣ ಹೆಚ್ಚಾಗಿದೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News