×
Ad

ಪಠಾಣ್‌ಕೋಟ್ ದಾಳಿಗೆ ಜೈಶ್- ಇ- ಮೊಹ್ಮದ್ ಮುಖ್ಯಸ್ಥ ಸೂತ್ರಧಾರಿ

Update: 2016-01-08 08:48 IST

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಾದ ಜೈಶ್- ಇ- ಮೊಹ್ಮದ್ ಮುಖ್ಯಸ್ಥ ಮೌಲಾನಾ ಅಜರ್ ಹಾಗೂ ಸಹೋದರ ಅಬ್ದುಲ್ ರವೂಫ್ ಅಸ್ಗರ್ ಅವರು ಪಠಾಣ್‌ಕೋಟ್ ದಾಳಿಯ ಸೂತ್ರದಾರರು ಎಂದು ಭಾರತದ ವಿಚಕ್ಷಣಾ ದಳ ಗುರುತಿಸಿದೆ.

ವಾಯುನೆಲೆಯ ಮೇಲೆ ನಡೆದ ಈ ಉಗ್ರದಾಳಿಯಲ್ಲಿ ಐಸಿ-814 ಅಪಹರಣದ ಸೂತ್ರದಾರರಾದ ಅಜರ್ ಸೇರಿದಂತೆ ನಾಲ್ಕು ಮಂದಿಯ ಕೈವಾಡವಿದೆ. ಈ ಸಂಚನ್ನು ಲಾಹೋರ್ ಬಳಿ ರೂಪಿಸಲಾಗಿದೆ ಎಂಬ ಬಗ್ಗೆ ಸಾಕ್ಷಿಗಳಿವೆ ಎಂದು ಸರ್ಕಾರ ಪ್ರಕಟಿಸಿದೆ.

ಈ ನಾಲ್ಕು ಮಂದಿಯ ವಿವರಗಳನ್ನು ಪಾಕಿಸ್ತಾನದ ಜತೆ ಸೂಕ್ತ ಮಾರ್ಗದ ಮೂಲಕ ಹಂಚಿಕೊಳ್ಳಲಾಗಿದೆ. ಇವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡರೆ ಮಾತ್ರ ಶಾಂತಿ ಮಾತುಕತೆ ಎಂಬ ಅಂಶವನ್ನೂ ಸ್ಪಷ್ಟಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೇವಲ್ ಈ ಬಗ್ಗೆ ಪಾಕಿಸ್ತಾನದ ಭದ್ರತಾ ಸಲಹೆಗಾರ ನಸರ್ ಖಾನ್ ಜಂಜೂವಾ ಜತೆ ಮಾತುಕತೆ ನಡೆಸಿ, ಧ್ವನಿಮುದ್ರಿತ ಸಾಕ್ಷಿ ಸೇರಿದಂತೆ ಎಲ್ಲ ಪುರಾವೆಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News