×
Ad

ಸಂಜಯ್‌ದತ್ ಬಿಡುಗಡೆ ವಿರುದ್ಧ ಅರ್ಜಿ

Update: 2016-01-08 08:52 IST

ಮುಂಬೈ: 1993ರ ಮುಂಬೈ ಸ್ಫೋಟ ಪ್ರಕರಣ ಸಂಬಂಧ ಐದು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಚಿತ್ರನಟ ಸಂಜಯ್‌ದತ್ ಅವರನ್ನು ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ತಡೆಯಬೇಕು ಎಂದು ಕೋರಿ ಮುಂಬೈ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ.

ಸರ್ಕಾರ ದತ್ ಅವರ ಜೈಲುಶಿಕ್ಷೆ ಅವಧಿಯನ್ನು 18 ತಿಂಗಳು ಮೊಟಕುಗೊಳಿಸಲು ಒಪ್ಪಿಗೆ ನೀಡಿತ್ತು. ಸಂಜಯ ದತ್ ಅವರಂತೆಯೇ ರಾಜ್ಯದಲ್ಲಿ 27740 ಕೈದಿಗಳನ್ನು ಸನ್ನಡತೆಯ ಕಾರಣದಿಂದ ಬಿಡುಗಡೆ ಮಾಡಲು ಅವಕಾಶವಿದೆ. ಆದರೆ ದತ್ ಅವರನ್ನು ಮಾತ್ರ ಬಿಡುಗಡೆ ಮಾಡುತ್ತಿರುವುದನ್ನು ಅರ್ಜಿದಾರ ಪ್ರದೀಪ್ ಬಾಲೇಕರ್ ಪ್ರಶ್ನಿಸಿದ್ದಾರೆ.

ಜೈಲು ಅಧಿಕಾರಿಯೊಬ್ಬರ ಮೇಲೆ ಸಂಜಯ ದತ್ ಅವರಿಗೆ ನೆರವು ನೀಡಿರುವ ಆರೋಪವನ್ನೂ ಅರ್ಜಿದಾರರು ಮಾಡಿದ್ದು, ಅವರ ಅಧಿಕೃತ ಆಸ್ತಿಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದೂ ಸೂಚಿಸಿದ್ದಾರೆ. ಈ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದೆ. ರಾಜ್ಯದ ಗೃಹಸಚಿವಾಲಯದ ಹೇಳಿಕೆ ಪ್ರಕಾರ, ಸಂಜಯ ದತ್ ಫೆಬ್ರವರಿ 27ರಂದು ಬಿಡುಗಡೆಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News