ಜೈಲಿಗೆ ಹೋಗಲು ಸಿದ್ಧರಾಗಿ: ಕೇಜ್ರಿವಾಲ್‌ಗೆ ಬಿಜೆಪಿ ಎಚ್ಚರಿಕೆ
Update: 2016-01-09 13:44 IST
ಹೊಸದಿಲ್ಲಿ: ಮಾನಹಾನಿ ವಿಮರ್ಶೆಗೆ ಸಂಬಂಧಿಸಿ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್‌ಗೆ ಬಿಜೆಪಿ ಹೇಳಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ದೂಷಿಸಿದೆ. ಕೇಜ್ರಿವಾಲ್ ಸ್ವಂತ ಸೋಲನ್ನು ಮರೆಮಾಚುವುದಕ್ಕಾಗಿ ರಾಜಕೀಯ ಉದ್ದೇಶಗಳಿಂದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದೂ ಬಿಜೆಪಿ ಹೇಳಿದೆ.
ದಿಲ್ಲಿ ಕ್ರಿಕೆಟ್ ಆಡಳಿತ ಸಮಿತಿ (ಡಿಡಿಸಿಎ)ಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ದಿಲ್ಲಿ ಸರಕಾರ ನೇಮಿಸಿದ ಆಯೋಗ ಸಂವಿಧಾನ ವಿರೋಧಿ ಎಂದು ಕೇಂದ್ರ ಸರಕಾರ ಈ ಹಿಂದೆ ಹೇಳಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಭೇಟಿಯಾಗುವ ಎಂದು ಕೇಜ್ರಿವಾಲ್ ತಿರುಗೇಟು ನೀಡಿದ್ದರು.
ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದ ವೇಳೆ ಭ್ರಷ್ಟಾಚಾರ ನಡೆಸಿದ್ದರು ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ವಿರುದ್ಧ ಜೇಟ್ಲಿ ದೂರು ನೀಡಿದ್ದರು.