ಪಠಾಣ್‌ಕೋಟ್ ತಲುಪಿದ ಪ್ರಧಾನಿ ಮೋದಿ; ಗಾಯಾಳು ಸೈನಿಕರ ಭೇಟಿ
Update: 2016-01-09 13:55 IST
ಪಠಾಣ್‌ಕೋಟ್: ಉಗ್ರರ ದಾಳಿಗೊಳಗಾದ ಪಂಜಾಬ್‌ನ ಪಠಾಣ್‌ಕೋಟ್ ವಾಯುಪಡೆ ನೆಲೆಗೆ ಪ್ರಧಾನಿ ನರೇಂದ್ರ ಮೋದಿ ತಲುಪಿದ್ದಾರೆ. ಈ ವೇಳೆ ಗಡಿ ಪ್ರದೇಶಗಳನ್ನು ವೀಕ್ಷಿಸಲಿರುವ ಅವರಿಗೆ, ಉಗ್ರರು ಅಡಗಿದ್ದ ಸ್ಥಳಗಳ ಬಗ್ಗೆ ಏರ್ ಕಮಾಂಡರ್ ಜೆ.ಎಸ್.ಧಾಮೂನ್ ವಿವರಿಸಲಿದ್ದಾರೆ.
ವಾಯುಪಡೆ ನೆಲೆಯನ್ನು ಸಂದರ್ಶಿದ ಬಳಿಕ ಪ್ರಧಾನಿ ಮೋದಿ, ಉಗ್ರರ ದಾಳಿಯಲ್ಲಿ ಗಾಯಗೊಂಡ ಸೈನಿಕರನ್ನು ಭೇಟಿ ಮಾಡಲಿದ್ದಾರೆ.
ಉಗ್ರರ ದಾಳಿಯ ಬಳಿಕ ಅಲ್ಲಿನ ಪರಿಸ್ಥಿತಿ ಹಾಗೂ ವಾಯುಪಡೆ ನೆಲೆಯ ಭದ್ರತೆಯ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ.
ಉಗ್ರರನ್ನು ಕೊಂದು ಹಾಕಿದ ಬಳಿಕ ವಾಯುಪಡೆ ನೆಲೆ ಸಂಪೂರ್ಣವಾಗಿ ತಪಾಸಣೆ ನಡೆಸಿ ಭದ್ರತೆಯನ್ನು ಖಚಿತಪಡಿಸಲಾಗಿದೆ ಎಂದು ವಾಯುಸೇನೆ ತಿಳಿಸಿದೆ.
ಇದೇ ವೇಳೆ ಘಟನೆಯ ಬಗ್ಗೆ ಎನ್‌ಐಎ ತಂಡದ ತನಿಖೆ ಮುಂದುವರಿದಿದೆ. ಗಡಿ ಗ್ರಾಮಗಳು ಹಾಗೂ ವಾಯುಪಡೆ ನೆಲೆಯಿಂದ ಸಂಗ್ರಹಿಸಲಾದ ಹೆಜ್ಜೆಗುರುತುಗಳನ್ನು ಫೋರೆನ್ಸಿಕ್ ಪರಿಶೀಲನೆಗಾಗಿ ಕಳುಹಿಸಲಾಗಿದೆ.