×
Ad

ಉಗ್ರ ಸಂಘಟನೆ ಮುಚ್ಚಲು ಭಾರತ ಷರತ್ತು?

Update: 2016-01-10 08:55 IST

ನವದೆಹಲಿ: ಪಾಕಿಸ್ತಾನದಲ್ಲೊರುವ ಜೈಶ್-ಇ- ಮೊಹ್ಮದ್ ಕ್ಯಾಂಪಸ್ ಮುಚ್ಚುವಂತೆ ಮತ್ತು ಸಂಘಟನೆಯ ಪ್ರಮುಖ ಮುಖಂಡರನ್ನು ಸೆರೆಮನೆಗೆ ಕಳುಹಿಸುವಂತೆ ಭಾರತ ಈ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಯಲ್ಲಿ ಆಗ್ರಹಿಸಲಿದೆ.

ಭಾರತ ಚಾಚಿರುವ ಸ್ನೇಹಹಸ್ತವನ್ನು ತಿರಸ್ಕರಿಸದಿರುವ ಪಾಕ್ ಕ್ರಮ ಸ್ವಾಗತಾರ್ಹ. ನಾಗರಿಕ ಸರ್ಕಾರದ ಬದ್ಧತೆಗೆ ಮಿಲಿಟರಿ ನೆರವು ಪಡೆಯಲು ಪಾಕಿಸ್ತಾನ ನಿರ್ಧರಿಸಿದೆ. ಆದರೆ ಅದಷ್ಟೇ ಸಾಲದು. ಶಾಂತಿಸ್ಥಾಪನೆ ನಿಟ್ಟಿನಲ್ಲಿ ಪಾಕಿಸ್ತಾನ "ಪ್ರಾಮಾಣಿಕ ಹಾಗೂ ಪ್ರಮುಖ" ನಿರ್ಧಾರ ಕೈಗೊಳ್ಳಬೇಕು ಎಂದು ಮೋದಿ ಬಯಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಅವರನ್ನು ತಕ್ಷಣ ಬಂಧಿಸಿದರೂ, ಅವರ ಸಂಘಟನೆ, ನಿಕಟ ಸಂಘಟನೆಗಳು ಹಾಗೂ ಕ್ಯಾಂಪಸ್ ತಮ್ಮ ಕಾರ್ಯವನ್ನು ಮುಂದುವರಿಸಲಿವೆ ಎಂಬ ಆತಂಕವಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News