×
Ad

ಗುಡ್ಡಗಾಡು ಗ್ರಾಮಗಳಿಗೆ ಉಚಿತ ವೈ-ಫೈ: ಟೆಕ್ಕಿಗಳ ಸಾಧನೆ

Update: 2016-01-10 09:00 IST

ಭೋಪಾಲ್: ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶಗಳ ಮೂರು ಗ್ರಾಮಗಳನ್ನು ಯಾವುದೇ ಸರ್ಕಾರಿ ನೆರವಿಲ್ಲದೇ ವೈ-ಫೈ ವಲಯಗಳಾಗಿ ನಾಲ್ವರು ಟೆಕ್ಕಿಗಳು ಅಭಿವೃದ್ಧಿಪಡಿಸಿದ್ದಾರೆ. ಇಂಥ ಪ್ರಯತ್ನ ದೇಶದಲ್ಲೇ ಮೊದಲನೆಯದು.

ಶಕೀಲ್ ಅಂಜುಂ, ತುಷಾರ್ ಬರ್ತರೆ, ಭಾನು ಯಾದವ್ ಹಾಗೂ ಅಭಿಷೇಕ್ ಅವರು ರಾಜಘಡ ಜಿಲ್ಲೆಯ ಶಿವನಾಥಪರದಲ್ಲಿ ಈ ಸಾಧನೆ ಮಾಡಿದ್ದು, ಇದು ಗ್ರಾಮದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಬವಾಡಿಖೇಡ ಜಾಗೀರ್, ದೇವ್ರಿಯಾ ಗ್ರಾಮಗಳಿಗೆ ವಿಸ್ತರಿಸಿದ್ದಾರೆ. ನವೆಂಬರ್‌ನಲ್ಲೇ ಈ ಪ್ರಾಯೋಗಿಕ ಸೇವೆ ಆರಂಭವಾಗಿದ್ದರೂ, ಇದೀಗ ಅಧಿಕೃತವಾಗಿ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಅಂಜುಂ ಹೇಳುತ್ತಾರೆ.

ಇದರಿಂದ ಉತ್ತೇಜಿತರಾದ ಹಲವು ಮಂದಿ ಗ್ರಾಮದಲ್ಲಿ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್, ಡಾಂಗಲ್‌ಗಳನ್ನು ಖರೀದಿಸುತ್ತಿದ್ದಾರೆ. ಇದಕ್ಕೆ ಮೂಲಸೌಕರ್ಯವಾಗಿ 80 ಅಡಿಯ ಟವರ್, 200 ಆಂಪೇರ್ ಇನ್‌ವರ್ಟರ್ ಸೌಲಭ್ಯವಿದೆ. ಮಾಸಿಕವಾಗಿ ಬರುವ 7 ರಿಂದ 8 ಸಾವಿರ ವೆಚ್ಚವನ್ನು ನಾಲ್ವರೂ ಭರಿಸುವುದಾಗಿ ಟೆಕ್ಕಿಗಳು ವಿವರಿಸುತ್ತಾರೆ.

ಭವಿಷ್ಯದಲ್ಲಿ ಬಡವರಿಗೆ ಅಗ್ಗವಾಗಿ ನೆಟ್ ಸೇವೆ ಸಿಗಬೇಕು ಎನ್ನುವುದು ಉದ್ದೇಶ ಎಂದು ಅಂಜುಂ ಹೇಳಿದ್ದಾರೆ. ಇದರಿಂದ ಉತ್ತೇಜಿತವಾದ ಜಿಲ್ಲಾಡಳಿತ ಇಡೀ ಜಿಲ್ಲೆಯನ್ನು ಡಿಜಿಟಲ್ ಜಿಲ್ಲೆಯಾಗಿ ಪರಿವರ್ತಿಸಲು ಕಾರ್ಯಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ತರುಣ್ ಪಿತೋಡೆ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News