×
Ad

ಫೆ.29ರಂದು ಕೇಂದ್ರ ಬಜೆಟ್

Update: 2016-01-15 00:02 IST

ಹೊಸದಿಲ್ಲಿ, ಜ.14: 2016-17ನೆ ಸಾಲಿನ ಕೇಂದ್ರ ಬಜೆಟನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಫೆಬ್ರವರಿ 29ರಂದು ಮಂಡಿಸಲಿದ್ದಾರೆಂದು ಸಹಾಯಕ ವಿತ್ತ ಸಚಿವ ಜಯಂತ್ ಸಿನ್ಹಾ ಗುರುವಾರ ತಿಳಿಸಿದ್ದಾರೆ. ಇದು ಜೇಟ್ಲಿ ಮಂಡಿಸಲಿರುವ ಎರಡನೆ ಪೂರ್ಣ ವರ್ಷದ ಬಜೆಟ್ ಆಗಲಿದೆ. ಬಜೆಟ್ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವರು ಜನವರಿ 4ರಂದು ಕೈಗಾರಿಕೆ, ಕಾರ್ಮಿಕ ಒಕ್ಕೂಟಗಳು ಹಾಗೂ ಅರ್ಥಶಾಸ್ತ್ರಜ್ಞರು ಮತ್ತಿತರರ ಜೊತೆ ಚರ್ಚಿಸಲಿದ್ದಾರೆ. ಆರ್ಥಿಕ ನೀತಿಗಳನ್ನು ರೂಪಿಸಲು ಸರಕಾರಕ್ಕೆ ಇದು ನೆರವಾಗುವುದರಿಂದ,ಇಂತಹ ಔಪಚಾರಿಕ ಬಜೆಟ್ ಪೂರ್ವ ಸಮಾಲೋಚನೆಗಳು ಹೆಚ್ಚಿನ ಮಹತ್ವವನ್ನು ಪಡೆದಿವೆ.


ಬಜೆಟ್ ಬಗ್ಗೆ ಜನಸ್ಪಂದನೆಯನ್ನು ಹೆಚ್ಚಿಸುವ ಪ್ರಯತ್ನವಾಗಿ ಸರಕಾರವು 2016-17ನೆ ಸಾಲಿನ ಬಜೆಟ್ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಿದೆ. ಈಗಾಗಲೇ ವಿತ್ತ ಸಚಿವಾಲಯವು ವೆಚ್ಚ ನಿರ್ವಹಣೆ ಇಲಾಖೆಯ ಅಧಿಕಾರಿಗಳ ಜೊತೆ ಬಜೆಟ್ ರಚನೆ ಕುರಿತ ಪ್ರಕ್ರಿಯೆಯನ್ನು ಆರಂಭಿಸಿದೆ.

 ಜೇಟ್ಲಿ ಟೀಂ


ಅರುಣ್ ಜೇಟ್ಲಿಯವರ ಬಜೆಟ್ ತಂಡದ ಮುಖ್ಯ ಸದಸ್ಯರ ವಿವರ ಹೀಗಿದೆ: ಸಹಾಯಕ ವಿತ್ತ ಸಚಿವ ಜಯಂತ್ ಸಿನ್ಹಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗಾರಿಯ. ಅಧಿಕಾರಿಗಳ ತಂಡದ ನೇತೃತ್ವವನ್ನು ವಿತ್ತ ಕಾರ್ಯದರ್ಶಿ ರತನ್ ವತಾಲ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ಕಂದಾಯ ಕಾರ್ಯದರ್ಶಿ ಹಸ್ಮುಖ್ ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News