×
Ad

ದೇಶದ ಪ್ರಥಮ ಸಂಪೂರ್ಣ ಸಾವಯವ ರಾಜ್ಯವಾಗಿ ಸಿಕ್ಕಿಂ

Update: 2016-01-15 00:05 IST

ಕೋಲ್ಕತಾ, ಜ.14: ಸಿಕ್ಕಿಂ ಭಾರತದ ಪ್ರಥಮ ಸಂಪೂರ್ಣ ಸಾವಯವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದು, ಸುಮಾರು 75 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಸಾವಯವ ಬೆಳೆಯಾಗಿ ಪರಿವರ್ತಿಸಿದೆ.


ಡಿಸೆಂಬರ್ ಅಂತ್ಯದಲ್ಲಿ ನಾವು ಸಂಪೂರ್ಣ ಸಾವಯವ ಸ್ಥಾನಮಾನವನ್ನು ಸಾಧಿಸಿದ್ದೇವೆ. ಜ.18ರಂದು ಗ್ಯಾಂಗ್ಟಕ್‌ನಲ್ಲಿ ನಡೆಯಲಿರುವ ತಾಳಿಕೆಯ ಕೃಷಿ ಸವೆ್ಮುೀಳನವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಇದನ್ನು ಅಧಿಕೃತವಾಗಿ ಘೋಷಿಸಲಿದ್ದಾರೆಂದು ಸಿಕ್ಕಿಂ ಸಾವಯವ ಅಭಿಯಾನದ ಕಾರ್ಯವಾಹಿ ನಿರ್ದೇಶಕ ಡಾ.ಅಂಬಳಗನ್ ತಿಳಿಸಿದ್ದಾರೆ.


  ಸುಮಾರು 75 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಸಾವಯವ ಉತ್ಪಾದನೆಯ ರಾಷ್ಟ್ರೀಯ ಕಾರ್ಯಕ್ರಮದ ಮಾರ್ಗಸೂಚಿಯಂತೆ ಸಾವಯವ ಪದ್ಧತಿಗಳು ಹಾಗೂ ಸಿದ್ಧಾಂತಗಳನ್ನು ಅನುಷ್ಠಾನಿಸುವ ಮೂಲಕ ಕ್ರಮೇಣ ಪ್ರಮಾಣಿತ ಸಾವಯವ ಭೂಮಿಯಾಗಿ ಪರಿವರ್ತಿಸಲಾಗಿದೆ. 12 ವರ್ಷಗಳ ಹಿಂದೆ, 2003ರಲ್ಲಿ ಪವನ್ ಚಾಮ್ಲಿಂಗ್ ನೇತೃತ್ವದ ಸರಕಾರವು ವಿಧಾನಸಭೆಯಲ್ಲಿ ಘೋಷಣೆ ಹೊರಡಿಸುವ ಮೂಲಕ ಸಿಕ್ಕಿಮನ್ನು ಸಾವಯವ ರಾಜ್ಯವನ್ನಾಗಿ ಮಾಡಲು ನಿರ್ಧರಿಸಿತ್ತು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News