ಕಲ್ಲಿದ್ದಲು ಹಗರಣ: ಆಧುನಿಕ್ ಕಾರ್ಪೊರೇಶನ್‌ನ ನಿರ್ದೇಶಕರಿಬ್ಬರಿಗೆ ಜಾಮೀನು
Update: 2016-01-16 00:28 IST
ಹೊಸದಿಲ್ಲಿ: ಒಡಿಶಾದ ಪತ್ರಪಾರ ಕಲ್ಲಿದ್ದಲು ಗಣಿ ಹಂಚಿಕೆಯನ್ನು ನಡೆದಿದೆಯೆನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಗಳಾಗಿರುವ ,ಆಧುನಿಕ್ ಕಾರ್ಪೊರೇಶನ್ ಲಿಮಿಟೆಡ್ ಇಬ್ಬರು ನಿರ್ದೇಶಕರಿಗೆ ವಿಶೇಷ ನ್ಯಾಯಾಲವೊಂದು ಇಂದು ಜಾಮೀನು ಮಂಜೂರು ಮಾಡಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್, ತಲಾ ರೂ. 1ಲಕ್ಷದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಒಬ್ಬನ ಭದ್ರತೆಯೊಂದಿಗೆ ನಿರ್ಮಲ್‌ಕುಮಾರ್ ಅಗರ್ವಾಲ್ ಹಾಗೂ ಮಹೇಶ್‌ಕುಮಾರ್ ಅಗರ್ವಾಲ್ ಎಂಬವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಆಧುನಿಕ ಕಾರ್ಪೊರೇಶನ್ ಲಿ.ನ ಅಧಿಕೃತ ಪ್ರತಿನಿಧಿಗಳಾಗಿರುವ ಇಬ್ಬರೂ ನಿರ್ದೇಶಕರು ಕಳೆದ ತಿಂಗಳು ಹೊರಡಿಸಿದ ಸಮನ್ಸ್‌ನನ್ವಯ ಇಂದು ನ್ಯಾಯಾಲಯಕ್ಕೆ ಹಾಜರಿದ್ದರು.
ವಿಚಾರಣೆಯ ವೇಳೆ ಸಿಬಿಐ, ಆರೋಪಿಗಳಿಗೆ, ತಾನು ಸಲ್ಲಿಸಿರುವ ದಾಖಲೆಗಳು ಹಾಗೂ ಆರೋಪ ಪಟ್ಟಿಯ ಪ್ರತಿಗಳನ್ನು ಇಂದೇ ನೀಡುತ್ತೇನೆಂದು ನ್ಯಾಯಾಲಯಕ್ಕೆ ತಿಳಿಸಿತು.