ಡಿಡಿಸಿಎ ಮೊಕದ್ದಮೆ ಉತ್ತರಿಸುವಂತೆ ಕೇಜ್ರಿವಾಲ್‌ಗೆ ಹೈಕೋರ್ಟ್ ಸೂಚನೆ
ಹೊಸದಿಲ್ಲಿ: ಜಿಲ್ಲಾ ಮತ್ತು ದಿಲ್ಲಿ ಕ್ರಿಕೆಟ್ ಮಂಡಳಿಯ(ಡಿಡಿಸಿಎ) ಕಾರ್ಯವೈಖರಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿ ಟೀಕೆ ಮಾಡಿದುದಕ್ಕಾಗಿ ಕ್ರಿಕೆಟ್ ಮಂಡಳಿಯು ದಾಖಲಿಸಿರುವ ಸಿವಿಲ್ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅಮಾನತುಗೊಂಡಿರುವ ಬಿಜೆಪಿ ಸಂಸದ ಆಝಾದ್‌ರಿಂದ ಉತ್ತರವನ್ನು ಕೇಳಿದೆ.
ಜಂಟಿ ರಿಜಿಸ್ಟ್ರಾರ್ ಅನಿಲ್‌ಕುಮಾರ್ ಸಿಸೋಡಿಯಾ ಡಿಡಿಸಿಎ ದಾಖಲಿಸಿರುವ ಮೊಕದ್ದಮೆಯ ಅಧ್ಯಯನ ನಡೆಸಿ, ಅರ್ಜಿಯು ಪರಿಶೀಲನಾರ್ಹವಾಗಿದೆ. ಆದುದರಿಂದ ಪ್ರತಿವಾದಿಗಳು (ಕೇಜ್ರಿವಾಲ್-ಆಝಾದ್) ತಮ್ಮ ನಿಲುವನ್ನು ಸ್ಟಷ್ಟಪಡಿಸಬೇಕೆಂದು ಸೂಚಿಸಿದರು.
ಪ್ರತಿವಾದಿಗಳು ಮಾ.2ರ ಮೊದಲು ತಮ್ಮ ಉತ್ತರಗಳನ್ನು ದಾಖಲಿಸಬೇಕೆಂದು ರಿಜಿಸ್ಟ್ರಾರ್ ಆದೇಶಿಸಿದರು.
ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಇತ್ತೀಚೆಗೆ ಕೆಲವು ಸುಳ್ಳು. ಆಘಾತಕಾರಿ, ಅವಮಾನಕಾರ, ಮಾನಹಾನಿಕರ, ಆಧಾರರಹಿತ, ನಿಂದನಾತ್ಮಕ, ದುರುದ್ದೇಶಿತ, ನಾಚಿಕೆಯ ಹಾಗೂ ಹೇಯ ಹೇಳಿಕೆಗಳನ್ನು ನೀಡಿದ್ದರು. ಅವು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳಾಗಿದೆಯೆಂಬ ಡಿಡಿಸಿಎ ದೂರಿನ ಹಿನ್ನಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.