ಐಪಿಎಲ್ ಮ್ಯಾಚ್ ಫಿಕ್ಸಿಂಗ್: ಅಜಿತ್ ಚಾಂಡಿಲಾಗೆ ಆಜೀವ, ಹಿಕೇನ್ ಶಾಗೆ ಐದು ವರ್ಷ ನಿಷೇಧ
Update: 2016-01-18 15:31 IST
ಮುಂಬೈ, ಜ.18: ರಾಜಸ್ಥಾನ ರಾಯಲ್ಸ್‌ನ ಮಾಜಿ ಆಟಗಾರರಾದ ಅಜಿತ್ ಚಾಂಡಿಲಾಗೆ ಕ್ರಿಕೆಟ್‌ನಿಂದ ಆಜೀವ ನಿಷೇಧ ಮತ್ತು ಹಿಕೇನ್ ಶಾಗೆ ಬಿಸಿಸಿಐ ಐದು ವರ್ಷಗಳ ನಿಷೇಧ ವಿಧಿಸಿದೆ.
ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ನೇತೃತ್ವದ ಮೂವರು ಸದಸ್ಯರ ಬಿಸಿಸಿಐನ ವಿಚಾರಣಾ ಸಮಿತಿಯು ಇಂದು ಆದೇಶ ನೀಡಿದೆ.
ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ೨೦೧೩ರಲ್ಲಿ ಅಜಿತ್ ಚಾಂಡಿಲಾರನ್ನು , ಎಸ್.ಶ್ರೀಶಾಂತ್ ಮತ್ತು ಅಂಕಿತ್ ಚವಾಣ್ ಅವರೊಂದಿಗೆ ದಿಲ್ಲಿ ಪೊಲೀಸರು ಬಂಧಿಸಿದ್ದರು. ಈ ಪೈಕಿ ಶ್ರೀಶಾಂತ್ ಮತ್ತು ಚವಾಣ್‌ಗೆ ಈಗಾಗಲೇ ಆಜೀವ ನಿಷೇಧ ವಿಧಿಸಲಾಗಿತ್ತು.
ಹಿಕೇನ್ ಶಾ ದೇಶಿಯ ಕ್ರಿಕೆಟ್‌ನಲ್ಲಿ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪ ಹೊಂದಿದ್ದಾರೆ. ಅವರ ವಿರುದ್ಧ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಿಷೇಧ ವಿಧಿಸಲಾಗಿದೆ.