ಸಂಶೋಧನಾ ವಿದ್ಯಾಥಿ೯ ರೋಹಿತ್ ಸಾವು: ಉನ್ನತ ಮಟ್ಟದ ತನಿಖೆಗೆ ಎಸ್ ಐ ಓ ಆಗ್ರಹ
ಬೆಂಗಳೂರು: ಹೈದರಾಬಾದ್ ವಿಶ್ವವಿದ್ಯಾನಿಲಯವು ಐದು ಮಂದಿ ದಲಿತ ಸಂಶೋಧನಾ ವಿದ್ಯಾಥಿ೯ಗಳ ಮೇಲೆ ಕೈಗೊಂಡಿರುವ ಅಮಾನತು ಕ್ರಮವು ಖಂಡನೀಯವಾದುದು. ಈ ಅಮಾನತಿನ ಕಾರಣದಿಂದಾಗಿ ಐದು ವಿದ್ಯಾಥಿ೯ಗಳ ಪೈಕಿ ರೋಹಿತ್ ವೆಮುಲಾ ಆತ್ಮಹತ್ಯೆಗೆ ಶರಣಾಗಿರುವ ಘಟನೆಯು ಶೈಕ್ಷಣಿಕ ಕ್ಷೇತ್ರದ ಸ್ವೇಚ್ಛಾಧಿಪತ್ಯ ಧೋರಣೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್ಐಓ) ಕನಾ೯ಟಕ ವಲಯ ಅಭಿಪ್ರಾಯಿಸಿದೆ.
ಎಸ್ಐಓ ರಾಜ್ಯ ಕಾರ್ಯದಶಿ೯ ಅಬ್ದುಲ್ ಕಬೀರ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ರೋಹಿತ್ ರವರ ಸಾವಿಗೆ ವಿಶ್ವವಿದ್ಯಾನಿಲಯ ಮತ್ತು ಆಡಳಿತ ಮಂಡಳಿಯವರು ಕಾರಣಕರ್ತರಾಗಿದ್ದು, ವಿವಿಯ ಆಡಳಿತ ವರ್ಗದವರ ಬೇಜವಾಬ್ದಾರಿಯುತ ನಡವಳಿಕೆಯಿಂದಾಗಿ ಅಮೂಲ್ಯವಾದ ಜೀವವೊಂದು ಸಾವಿಗೆ ಶರಣಾದುದು ಖೇದನೀಯ. ವಿವಿಯು ದಲಿತ ವಿದ್ಯಾಥಿ೯ಗಳ ವಿರುದ್ಧ ನೀಡಿರುವ ಅಮಾನತು ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಅಲ್ಲದೇ, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದವರು ತಿಳಿಸಿದ್ದಾರೆ.
ವಿವಿಯವರು ದಲಿತ ವಿದ್ಯಾಥಿ೯ಗಳ ಕುರಿತು ಕ್ಯಾಂಪಸ್ ನೊಳಗೆ ನ್ಯಾಯಯುತವಾದ ವಿಚಾರಣೆ ನಡೆಸಬೇಕು. ದಲಿತ ವಿದ್ಯಾಥಿ೯ಗಳ ಅಮಾನತಿಗೆ ಕಾರಣರಾದವರ ವಿರುದ್ಧ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವ ಎಸ್ ಐ ಓ, ಕಾಲೇಜು ಹಾಗೂ ವಿವಿಗಳ ಕ್ಯಾಂಪಸ್ಸಿನೊಳಗೆ ಇನ್ನಾದರೂ ದಲಿತರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸೂಕ್ತವಾದ ಕ್ರಮಗಳನ್ನು ಎಂಎಚ್ ಆರ್ ಡಿ ಇಲಾಖೆಯು ಮುಂದಾಗಬೇಕೆಂದು ಒತ್ತಾಯಿಸಿದೆ.
ದೇಶದ ಉತ್ತಮ ಸಂಶೋಧನಾ ವಿದ್ಯಾಥಿ೯ ರೋಹಿತ್ ರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಎಸ್ ಐ ಓ, ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ನುಸುಳಿರುವ ವ್ಯವಸ್ಥಿತ ಅಸಮಾನತೆಯ ಕಾರಣದಿಂದಾಗಿ ಪ್ರತಿಭಾನ್ವಿತ ವಿದ್ಯಾಥಿ೯ಯನ್ನು ಮೊಳಕೆಯಲ್ಲೇ ಚಿವುಟಿ ಹಾಕಿರೋದು ವಿಷಾದನೀಯ ಸಂಗತಿ ಎಂದು ರಾಜ್ಯ ಕಾರ್ಯದಶಿ೯ಅಬ್ದುಲ್ ಕಬೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.