ಗಣರಾಜ್ಯೋತ್ಸವ ದಿನ ಪೆರೇಡ್‌ನಲ್ಲಿ ಶಬರಿಮಲೆ ಸ್ತಬ್ಧ ಚಿತ್ರ ಇಲ್ಲ
Update: 2016-01-23 16:45 IST
ಪತ್ತಣತಿಟ್ಟ: ಕೆಲವು ಕಡೆಗಳಿಂದ ಶಕ್ತಿಶಾಲಿ ವಿರೋಧ ವ್ಯಕ್ತವಾದ ಕಾರಣದಿಂದ ಶಬರಿ ಮಲೆ ದೇವಾಲಯದ ಸ್ತಬ್ದ ಚಿತ್ರವನ್ನು ರಿಪಬ್ಲಿಕ್ ದಿನದ ಪೆರೆಡ್‌ನಿಂದ ತೆಗೆದು ಹಾಕುವ ಸಾಧ್ಯತೆಯಿದೆಎಂದು ವರದಿಯಾಗಿದೆ. ಶಬರಿಮಲೆಯ ಆಚಾರಗಳು ಮಹಿಳಾವಿರೋಧಿಯಾಗಿದೆ ಎಂದು ಬೊಟ್ಟುಮಾಡಿಕೆಲವು ಸಂಘಟನೆಗಳು ದೂರು ನೀಡಿರುವುದು ಈ ಕ್ರಮಕೈಗೊಳ್ಳಲು ಕಾರಣವಾಗಿದೆ. ಈ ವಿಷಯವನ್ನು ಕೇಂದ್ರದ ಗೃಹ ಖಾತೆಗೆ ತಿಳಿಸಿಯೂ ಯಥಾ ಸಮಯದಲ್ಲಿ ಸ್ಪಷ್ಟೀಕರಣ ನೀಡಲು ಸಂಸ್ಕೃತಿ ಸಚಿವಾಲಯ ಸಿದ್ಧವಾಗದಿರುವುದರಿಂದ ಶಬರಿಮಲೆ ಸ್ತಬ್ಧ ಚಿತ್ರವನ್ನು ಪರಿಗಣಿಸದಿರಲು ಕಾರಣವಾಗಿದೆ ಎಂದು ಹೇಳಲಾಗಿದೆ.