×
Ad

ಪರಂಜೊಯ್ ಗುಹಾ ಥಾಕುರ್ಥಾ 'ಇಪಿಡಬ್ಲ್ಯು' ನೂತನ ಸಂಪಾದಕ

Update: 2016-01-23 20:50 IST


ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ಪ್ರತಿಷ್ಠಿತ ನಿಯತಕಾಲಿಕ ಎಕನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ (ಇ ಪಿ ಡಬ್ಲ್ಯು) ನ ನೂತನ ಸಂಪಾದಕರಾಗಿ ಖ್ಯಾತ ಪತ್ರಕರ್ತ, ಸಂಶೋಧಕ ಹಾಗು ಬುದ್ಧಿಜೀವಿ ಪರಂಜೊಯ್ ಗುಹಾ ಥಾಕುರ್ಥಾ ಆಯ್ಕೆಯಾಗಿದ್ದಾರೆ. ಕಳೆದೊಂದು ದಶಕದಿಂದ ಇ ಪಿ ಡಬ್ಲ್ಯುನ ಸಂಪಾದಕರಾಗಿ ಅದನ್ನು ಉನ್ನತ ಸ್ಥಾನಕ್ಕೇರಿಸಿದ ಸಿ. ರಾಮ್ ಮನೋಹರ್ ರೆಡ್ಡಿ ಅವರು ಮಾರ್ಚ್ ೩೧ಕ್ಕೆ ತೆರವುಗೊಲಿಸಲಿರುವ ಸ್ಥಾನವನ್ನು ಪರಂಜೊಯ್ ಎಪ್ರಿಲ್ ಒಂದರಿಂದ ಸ್ವೀಕರಿಸಲಿದ್ದಾರೆ ಎಂದು ನಿಯತಕಾಲಿಕವನ್ನು ಪ್ರಕಟಿಸುವ ಸಮೀಕ್ಷಾ ಟ್ರಸ್ಟ್ ತಿಳಿಸಿದೆ. 
ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪರಂಜೊಯ್ ಅವರು ರಾಜಕೀಯ ವಿಶ್ಲೇಷಣೆ ಹಾಗು ಸಂಶೋಧನಾತ್ಮಕ ಬರಹ ಹಾಗು ವರದಿಗಳಿಗೆ ಖ್ಯಾತರಾಗಿದ್ದಾರೆ.  ಅವರ ಇತ್ತೀಚಿನ ಕೃತಿ " ಗ್ಯಾಸ್ ವಾರ್ಸ್ : ಕ್ರೋನಿ ಕ್ಯಾಪಿಟಲಿಸಂ ಎಂಡ್ ದಿ ಅಂಬಾನಿಸ್ " ರಿಲಯನ್ಸ್ ಇಂಡಸ್ಟ್ರೀಸ್ ನ ವಿವಾದಾತ್ಮಕ ಅನಿಲ ವ್ಯವಹಾರಗಳ  ಕುರಿತು ಸಾಕ್ಷ್ಯಾಧಾರಗಳ ಸಹಿತ ಬೆಳಕು ಚೆಲ್ಲುವ ಮೂಲಕ ಭಾರಿ ಚರ್ಚೆಗೊಳಗಾಗಿತ್ತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News