×
Ad

ರಾಂಚಿಯಲ್ಲಿ ಅತ್ಯಂತ ಎತ್ತರದಲ್ಲಿ ಅರಳಿದ ದೇಶದ ಅತ್ಯಂತ ದೊಡ್ಡ ತ್ರಿವರ್ಣ ಧ್ವಜ

Update: 2016-01-23 23:27 IST

ರಾಂಚಿ, ಜ.23: ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಶನಿವಾರ ಇಲ್ಲಿಯ ಪಹಾಡಿ ಮಂದಿರದಲ್ಲಿ ಅತ್ಯಂತ ಎತ್ತರದ ಧ್ವಜಸ್ತಂಭದಲ್ಲಿ ದೇಶದ ಅತ್ಯಂತ ದೊಡ್ಡ ತ್ರಿವರ್ಣ ಧ್ವಜವನ್ನು ಅರಳಿಸಿದರು.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 119ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ದೇಶದ ಅತ್ಯಂತ ಎತ್ತರದ,ಅತ್ಯಂತ ದೊಡ್ಡ ಮತ್ತು ಅತ್ಯಂತ ಸುಂದರ ತ್ರಿವರ್ಣ ಧ್ವಜವನ್ನು ಅರಳಿಸುತ್ತಿರುವುದು ನನ್ನಲ್ಲಿ ಹಿಗ್ಗನ್ನುಂಟು ಮಾಡಿದೆ ಎಂದು ಪಾರಿಕ್ಕರ್ ಹೇಳಿದರು.
66 ಅಡಿ ಎತ್ತರ ಮತ್ತು 99 ಅಡಿ ಅಗಲವಿರುವ ಈ ಧ್ವಜವನ್ನು 293 ಅಡಿ ಎತ್ತರದ ಸ್ತಂಭದಲ್ಲಿ ಅರಳಿಸಲಾಗಿದೆ.
ನಿನ್ನೆಯವರೆಗೂ ದೇಶದ ಅತ್ಯಂತ ದೊಡ್ಡ ತ್ರಿವರ್ಣ ಧ್ವಜದ ಹೆಗ್ಗಳಿಕೆ ಫರೀದಾಬಾದ್‌ನಲ್ಲಿ 250 ಅಡಿ ಎತ್ತರದ ಸ್ತಂಭದಲ್ಲಿ ಹಾರಾಡುತ್ತಿರುವ ಧ್ವಜದ್ದಾಗಿತ್ತು. ಅದು 64 ಅಡಿ ಎತ್ತರ ಮತ್ತು 96 ಅಡಿ ಅಗಲವನ್ನು ಹೊಂದಿದೆ. ಅದನ್ನು ಕಳೆದ ವರ್ಷ ಆರೋಹಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News