×
Ad

2015ರಲ್ಲಿ ಮಹಾರಾಷ್ಟ್ರದಲ್ಲಿ 3,228 ರೈತರ ಆತ್ಮಹತ್ಯೆ ಪರಿಹಾರ-ಪುನರ್ವಸತಿ ಇಲಾಖೆ

Update: 2016-01-23 23:32 IST

 ಮುಂಬೈ, ಜ.23: ಕಳೆದ ವರ್ಷ (2015) ಮಹಾರಾಷ್ಟ್ರದಲ್ಲಿ 1 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದ ಎರಡು ದಿನಗಳ ಬಳಿಕ, ಅದರ ಪರಿಹಾರ ಮತ್ತು ಪುನರ್ವಸತಿ ಇಲಾಖೆ ನೀಡಿರುವ ಅಂಕಿ-ಅಂಶಗಳು, ಕಳೆದ ವರ್ಷ ಒಟ್ಟು 3,288 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದೆ.
ಇವರಲ್ಲಿ 1,841 ರೈತರ ಕುಟುಂಬಗಳು ಪರಿಹಾರ ಪಡೆಯಲು ಅರ್ಹವಾಗಿವೆಯೆಂದು ಅದು ಹೇಳಿದೆ.
ಎರಡೂ ಸಂಖ್ಯೆಗಳು ಸರಿಯಾಗಿಯೇ ಇವೆ. ಸರಕಾರವು ಹೈಕೋರ್ಟ್‌ಗೆ ಒದಗಿಸಿರುವ ಮಾಹಿತಿ ಕೇವಲ ಕೃಷಿ ಸಂಬಂಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರದ್ದಾಗಿದೆ. ಆದುದರಿಂದ ಅವರು ಪರಿಹಾರಕ್ಕೆ ಅರ್ಹರಾಗಿದ್ದಾರೆಂದು ಮಹಾರಾಷ್ಟ್ರದ ಕೃಷಿ ಸಚಿವ ಏಕನಾಥ ಖಡ್ಸೆ ಪ್ರತಿಪಾದಿಸಿದ್ದಾರೆ.
ಅಮರಾವತಿಯಲ್ಲಿ 1,179, ಔರಂಗಾಬಾದ್‌ನಲ್ಲಿ 1,130, ನಾಶಿಕ್‌ದಲ್ಲಿ 459, ನಾಗಪುರದಲ್ಲಿ 362, ಪುಣೆಯಲ್ಲಿ 96 ಹಾಗೂ ಕೊಂಕಣ್ ವಲಯದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆಂದು ಪರಿಹಾರ ಮತ್ತು ಪುನರ್ವಸತಿ ಇಲಾಖೆ ವಿವರ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News