×
Ad

ಬಿಗ್‌ಬಾಸ್ 9 ಫಿನಾಲೆ ಗೆದ್ದ ಪ್ರಿನ್ಸ್ ನರುಲಾ

Update: 2016-01-24 08:59 IST

ನವದೆಹಲಿ: ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಬಿಗ್‌ಬಾಸ್-9 ಫಿನಾಲೆ ರೋಚಕವಾಗಿ ಅಂತ್ಯವಾಗಿದೆ. ಪ್ರಿನ್ಸ್ ನರೂಲಾ, ಮಂದನಾ ಕರಿಮಿ, ರಿಷಬ್ ಸಿನ್ಹಾ ಹಾಗೂ ರೊಚೆಲ್ಲೆ ರಾವ್ ಇವರ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಿದೆ....

ತಮ್ಮ ವಿಶಿಷ್ಟ ಫೈಟ್ ಹಾಗೂ ಫ್ಲರ್ಟ್‌ಗೆ ಹೆಸರಾದ ಪ್ರಿನ್ಸ್ ನರುಲಾ ಶನಿವಾರ ತಡರಾತ್ರಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ರಿಷಬ್ ಸಿನ್ಹಾ ಮೊದಲ ರನ್ನಪ್ ಪ್ರಶಸ್ತಿ ಗೆದ್ದಿದ್ದಾರೆ.

ಫಲಿತಾಂಶ ಪ್ರಕಟಿಸುವ ಮುನ್ನ ಎಲ್ಲ ಸ್ಪರ್ಧಿಗಳು ಅರ್ಜುನ್ ಕಪೂರ್ ಅವರನ್ನು ಎದುರಿಸುವ ಸವಾಲು ಹಾಕಲಾಯಿತು. ಬಿಗ್‌ಬಾಸ್ ಹೌಸ್‌ಗೆ ಆಗಮಿಸಿದ ಕ್ಷತ್ರಂಜ್ ಕೆ ಕಿಲಾಡಿ ಸ್ಪರ್ಧಾಳುಗಳಿಗೆ ಸವಾಲು ಹಾಕಿದರು. ಬಿಗ್‌ಬಾಸ್ 9 ಆಕಾಂಕ್ಷಿಗಳಿಗೆ ಕೃಷ್ಣ ಅಭಿಷೇಕ್ ಹಾಗು ಭಾರತಿ ಸಿಂಗ್ ಅವರ ಜತೆ ಲಘುಹಾಸ್ಯದ ಕ್ಷಣಗಳನ್ನು ಕಳೆಯಲೂ ಅವಕಾಶ ಮಾಡಿಕೊಡಲಾಗಿತ್ತು.

ಈ ರಿಯಾಲಿಟಿ ಷೋ ಸ್ಟಾರ್‌ನ ಕೊಠಡಿಗೆ ಪಾರ್ಟರ್ ಆಗಿ ಯಾರೂ ಹೋಗಲು ಬಯಸಿರಲಿಲ್ಲ. ಪ್ರಿನ್ಸ್ ಅವರನ್ನು ಪರಿಚಯವಾದ ತಕ್ಷಣ ಎಲ್ಲ ಸ್ಪರ್ಧಿಗಳು ದೂರ ಉಳಿದಿದ್ದರು. ಪ್ರಿನ್ಸ್ ಈ ಮುನ್ನ ಮಿಸ್ಟರ್ ಪಂಜಾಬ್, ರೋಡ್‌ಲೈನ್ಸ್ ರಿಯಾಲಿಟಿ ಷೋಗಳಲ್ಲಿ ಗೆದ್ದಿದ್ದರು. ಏಕಾಂಗಿಯಾಗಿಯೇ ಉಳಿದು ತಮ್ಮ ಆಕ್ಷನ್, ನಾಟಕೀಯತೆ ಹಾಗೂ ರೊಮಾನ್ಸ್ ಪ್ರದರ್ಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News