×
Ad

ಮಲೇರಿಯ ನಿರ್ಮೂಲನೆಗೆ ಬ್ರಿಟನ್, ಗೇಟ್ಸ್ ಬೃಹತ್ ಯೋಜನೆ

Update: 2016-01-25 23:49 IST

ಲಂಡನ್, ಜ. 25: ‘‘ಜಗತ್ತಿನ ಭಯಾನಕ ಕೊಲೆಗಾರ’’ ಮಲೇರಿಯವನ್ನು ಈ ಜಗತ್ತಿನಿಂದ ನಿರ್ಮೂಲನೆ ಮಾಡುವ ಉದ್ದೇಶದ 300 ಕೋಟಿ ಪೌಂಡ್ (ಸುಮಾರು 29,000 ಕೋಟಿ ರೂಪಾಯಿ) ಯೋಜನೆಯನ್ನು ಬ್ರಿಟನ್‌ನ ಹಣಕಾಸು ಸಚಿವ ಚಾನ್ಸಲರ್ ಜಾರ್ಜ್ ಆಸ್‌ಬೋರ್ನ್ ಮತ್ತು ತಂತ್ರಜ್ಞಾನ ದೈತ್ಯ ಬಿಲ್ ಗೇಟ್ಸ್ ಸೋಮವಾರ ಪ್ರಕಟಿಸಿದರು.
ಸೊಳ್ಳೆಯಿಂದ ಹರಡುವ ಕಾಯಿಲೆಯನ್ನು ನಿರ್ಮೂಲಗೊಳಿಸುವ ಉದ್ದೇಶದ ಸಂಶೋಧನೆ ಮತ್ತು ಇತರ ಪ್ರಯತ್ನಗಳಿಗೆ ಮುಂದಿನ ಐದು ವರ್ಷಗಳಲ್ಲಿ 29,000 ಕೋಟಿ ರೂ. ವೆಚ್ಚ ಮಾಡುವುದಾಗಿ ‘ದ ಟೈಮ್ಸ್’ನಲ್ಲಿ ಪ್ರಕಟಗೊಂಡ ಜಂಟಿ ಲೇಖನವೊಂದರಲ್ಲಿ ಅವರು ತಿಳಿಸಿದರು.
‘‘ಮಾನವ ದುರಂತದ ವಿಷಯದಲ್ಲಿ, ಮಲೇರಿಯ ಹರಡುವ ಸೊಳ್ಳೆ ಮಾಡುವಷ್ಟು ವಿನಾಶವನ್ನು ಬೇರೆ ಯಾವ ಜೀವಿಯೂ ಮಾಡುವುದಿಲ್ಲ’’ ಎಂದು ಅವರು ಬರೆದಿದ್ದಾರೆ.
‘‘ಮಲೇರಿಯ ಮುಕ್ತ ಜಗತ್ತು ಅತ್ಯಂತ ಮಹತ್ವದ ಜಾಗತಿಕ ಆರೋಗ್ಯ ಆದ್ಯತೆಯಾಗಬೇಕು ಎಂದು ನಾವಿಬ್ಬರೂ ನಂಬುತ್ತೇವೆ’’ ಎಂದಿದ್ದಾರೆ.
ಬ್ರಿಟನ್‌ನ ವಿದೇಶಿ ನೆರವು ಬಜೆಟ್‌ನಿಂದ ಮುಂದಿನ ಐದು ವರ್ಷಗಳ ಕಾಲ ಪ್ರತಿ ವರ್ಷ 4,829 ಕೋಟಿ ರೂಪಾಯಿ ಮೊತ್ತವನ್ನು ಈ ಕಾರ್ಯಕ್ರಮಕ್ಕೆ ಒದಗಿಸಲಾಗುವುದು. ಅದೇ ವೇಳೆ, ಗೇಟ್ಸ್ ಫೌಂಡೇಶನ್ ಈ ವರ್ಷ 1,350 ಕೋಟಿ ರೂಪಾಯಿ ಒದಗಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News