×
Ad

ಭಾರತ ಮೂಲದ ಇಮಾಮ್‌ಗೆ ಬ್ರಿಟನ್ ವಿವಿಯಿಂದ ಗೌರವ ಡಾಕ್ಟರೇಟ್

Update: 2016-01-25 23:51 IST

ಲಂಡನ್, ಜ. 25: ಭಾರತ ಮೂಲದ ಹಿರಿಯ ಇಮಾಮ್ ಒಬ್ಬರಿಗೆ ಅವರು ಸ್ಥಳೀಯ ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಗಣನೆಗೆ ತೆಗೆದುಕೊಂಡು ಲೀಸೆಸ್ಟರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ.
ಮುಹಮ್ಮದ್ ಶಾಹಿದ್ ರಝ ಲೀಸೆಸ್ಟರ್ ಕೇಂದ್ರೀಯ ಮಸೀದಿಯಲ್ಲಿ ಪ್ರಧಾನ ಇಮಾಮ್ ಆಗಿದ್ದಾರೆ ಹಾಗೂ ಬ್ರಿಟನ್‌ನಲ್ಲಿ ಪ್ರಮುಖ ಮುಸ್ಲಿಮ್ ಧರ್ಮಗುರು ಹಾಗೂ ಶಿಕ್ಷಕರಾಗಿದ್ದಾರೆ.
ಬಿಹಾರದಲ್ಲಿ ಜನಿಸಿದ ಅವರು, ಮೊರಾದಾಬಾದ್, ಆಗ್ರಾ ಮತ್ತು ಮೀರತ್‌ಗಳಲ್ಲಿ ಅಧ್ಯಯನ ಮಾಡಿದರು ಹಾಗೂ ಬಳಿಕ ಬ್ರಿಟನ್‌ಗೆ ತೆರಳಿದರು.
 ‘‘ಶೈಕ್ಷಣಿಕವಾಗಿ ಸಾಧನೆ ಮಾಡುವ ಹಾಗೂ ಸಮಾಜದ ವೌಲ್ಯಯುತ ಸದಸ್ಯರಾಗಿ ಸಮಾಜಕ್ಕೆ ದೇಣಿಗೆ ನೀಡುವ ಮನೋಭಾವವನ್ನು ನನ್ನ ವಿದ್ಯಾರ್ಥಿಗಳಲ್ಲಿ ಬೆಳೆಸಲು ನಾನು ಶ್ರಮಿಸಿದ್ದೇನೆ. ನನ್ನ ಹಲವು ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದುಕೊಂಡಿದ್ದಾರೆ ಹಾಗೂ ಇದೇ ನಗರದಲ್ಲಿ ಸರಕಾರಿ ಅಧಿಕಾರಿಗಳಾಗಿ, ಶಿಕ್ಷಕರಾಗಿ, ವೈದ್ಯರಾಗಿ ಹಾಗೂ ಉದ್ಯಮಿಗಳಾಗಿ ಈಗ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯಿಂದ ನಾನು ಸಂತೋಷಗೊಂಡಿದ್ದೇನೆ. ಈ ಕಾರಣಕ್ಕಾಗಿ ಈ ಪ್ರಶಸ್ತಿ ನನಗೆ ಮಹತ್ವದ್ದಾಗಿದೆ ಹಾಗೂ ಇದು ಲೀಸೆಸ್ಟರ್‌ನ ಯುವ ಮುಸ್ಲಿಮರಿಗೆ ಇನ್ನಷ್ಟು ಪ್ರೇರಣೆಯಾಗುವುದು ಎಂದು ಭಾವಿಸುತ್ತೇನೆ’’ ಎಂದು ಮುಹಮ್ಮದ್ ಶಾಹಿದ್ ರಝ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News