ಸರ್ಬಾನಂದ ಸೋನೋವಾಲ್ ಅಸ್ಸಾಂ ನ ಬಿಜೆಪಿ ಮುಖ್ಯ ಮಂತ್ರಿ ಅಭ್ಯರ್ಥಿ
Update: 2016-01-28 21:58 IST
ಗುವಾಹಾಟಿ , ಜ. ೨೮: ಮುಂಬರುವ ವಿಧಾನ ಸಭಾ ಚುನಾವಣೆಗೆ ಅಸ್ಸಾಂ ನ ಮುಖ್ಯ ಮಂತ್ರಿ ಅಭ್ಯರ್ಥಿಯಾಗಿ ಅಲ್ಲಿನ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಇಂದು ಆಯ್ಕೆ ಮಾಡಿದೆ .
ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಉಪಸ್ಥಿತರಿದ್ದ ಸಂಸದೀಯ ಸಮಿತಿ ಸಭೆಯ ಬಳಿಕ ಇದನ್ನು ಪ್ರಕಟಿಸಲಾಯಿತು .