ಮಗಳ ಮೇಲೆ ಪೊಲೀಸ್ ಅತ್ಯಾಚಾರ: ಮಾಜಿ ಯೋಧ ಆತ್ಮಹತ್ಯೆ
Update: 2016-01-29 09:09 IST
ನವದೆಹಲಿ: ಹರ್ಯಾಣ ನಾಗರಿಕ ಸಚಿವಾಲಯದ ಎದುರು ಗುರುವಾರ ಮಾಜಿ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಸೋನಿಪಠ್ ಪೊಲೀಸರು ನನ್ನ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಪದೇ ಪದೇ ಅತ್ಯಾಚಾರ ನಡೆಸುತ್ತಿರುವುದರಿಂದ ಮನನೊಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಆತ್ಮಹತ್ಯೆ ಟಿಪ್ಪಣಿಯಲ್ಲಿ ಹೇಳಿದ್ದಾರೆ.
ಸೋನಿಪಠ್ ಜಿಲ್ಲೆಯ ಖರ್ಕೋಡ ಪೊಲೀಸ್ ಠಾಣೆ ವ್ಯಾಪ್ತಿಯ ಸಿಸಾನ ಗ್ರಾಮದ ಇವರು, ತಮ್ಮ ಎರಡನೇ ಪತ್ನಿ ಹಾಗೂ ಖರ್ಕೋಡ ಪೊಲೀಸರು ಇದಕ್ಕೆ ಇದಕ್ಕೆ ಕಾರಣ ಎಂದು ದೂರಿದ್ದಾರೆ.
ಠಾಣೆಯ ಪೊಲೀಸ್ ಅಧಿಕಾರಿಗಳು ಮನೆಗೆ ಬಂದು ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ ಎಂದು ವಿವರಿಸಿದ್ದಾರೆ.