ಸೋಲಾರ್ ಲಂಚ: ಯುಡಿಎಫ್ ನಲ್ಲಿ ಬಿಕ್ಕಟ್ಟು ತೀವ್ರ, ಚುನಾವಣೆಗೆ ತೆರಳುವ ಸಾಧ್ಯತೆ

Update: 2016-01-29 06:35 GMT

  ತಿರುವನಂತಪುರಂ: ಸೋಲಾರ್ ಲಂಚ ಪ್ರಕರಣದಲ್ಲಿ ಸರಿತಾ ಎಸ್ ನಾಯರ್ ನೀಡಿರುವ ಸಾಕ್ಷ್ಯಗಳು ಕೇರಳದ ರಾಜಕೀಯವನ್ನೇ ಕಂಪಿಸುವಂತೆ ಮಾಡಿದೆ. ಕೇರಳದ ಮುಖ್ಯಮಂತ್ರಿ ಒಂದು ವಂಚಕ ತಂಡದ ನಾಯಕನಂತೆ ವರ್ತಿಸಿದ್ದಾರೆ ಎಂದು ಸಾರ್ವಜನಿಕರ ನಡುವೆ ಬಹಳ ಗಂಭೀರ ಚರ್ಚೆ ಕೇರಳದಲ್ಲಿ ಈಗನಡೆಯುತ್ತಿದೆ.

ಜೊತೆಗೆ ತೃಶೂರ್‌ನ ವಿಜಿಲೆನ್ಸ್ ಕೋರ್ಟ್ ಅವರ ವಿರುದ್ಧ ಕೇಸು ದಾಖಲಿಸಲಿಕ್ಕೂ ಸೂಚಿಸಿದೆ. ಮುಖ್ಯಮಂತ್ರಿ ಈ ಯಾವುದಕ್ಕೂ ತಲೆ ಕೆಡಿಸಿಕೊಂಡಿರುವಂತೆ ಕಂಡು ಬಂದಿಲ್ಲ. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಹೇಳಿ ಅಧಿಕಾರಕ್ಕೆ ಜೋತುಬೀಳಲು ಹವಣಿಸುತ್ತಿದ್ದಾರೆ ಎಂದು ಅವರ ಟೀಕಾಕಾರರು ಹೇಳುತ್ತಿದ್ದಾರೆ ಬಹಳಕಾಲದಿಂದ ನಾಯಕತ್ವ ಬದಲಾವಣೆಗಾಗಿ ವಾದಿಸುತ್ತಿರುವ ಕಾಂಗ್ರೆಸ್‌ನ ಐ ಗ್ರೂಪ್ ಉಮ್ಮನ್‌ಚಾಂಡಿ ರಾಜಿನಾಮೆ ನೀಡಬೇಕೆಂದು ಬಹಿರಂಗವಾಗಿ ಹೇೀಳಿಲ್ಲವಾದರೂ ಅದು ನಾಯಕತ್ವ ಬದಲಾವಣೆಗಾಗಿ ಒಳಗೊಳಗೆ ಮಸಲತ್ತು ನಡೆಸುತ್ತಿರುವ ವಿಚಾರ ಬಹಿರಂಗವಾಗಿದೆ. ಕೇರಳ ಉಸ್ತುವಾರಿಯಲ್ಲಿರುವ ಮುಕುಲ್ ವಾಸ್ನಿಕ್‌ರ ಮುಂದೆ ಉಮ್ಮನ್ ಚಾಂಡಿ ರಾಜಿನಾಮೆ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.

ಜೊತೆಗೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸೋನಿಯಾ ಗಾಂಧಿ ಎಕೆ ಆ್ಯಂಟನಿಯವರ ಅಭಿಪ್ರಾಯವನ್ನು ಕೇಳಿದ್ದಾರೆಂದೂ ವರದಿಯಾಗಿದೆ. ಆದರೆ ಮೂರು ತಿಂಗಳಿಗಾಗಿ ವಿಎಂ ಸುಧೀರನ್‌ರನ್ನು ಅಥವಾ ಆ್ಯಂಟನಿಯವರನ್ನು ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗೊಂದು ನಾಯಕತ್ವದ ಬದಲಾವಣೆ ಬೇಡ. ಅಂತಹ ಅಗತ್ಯ ಎದುರಾದರೆ ಸಚಿವಸಂಪುಟವನ್ನು ವಿಸರ್ಜಿಸಿ ಚುನಾವಣೆ ತೆರಳುವುದಕ್ಕೆ ಉಮ್ಮನ್‌ಚಾಂಡಿ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಸರಿತಾ ಮಾಡಿರುವ ಆರೋಪಗಳನ್ನು ಜನತಾ ನ್ಯಾಯಾಲಯದಲ್ಲಿ ಎದುರಿಸುತ್ತೇನೆ ಎಂದು ಉಮ್ಮನ್ ಚಾಂಡಿ ಹೇಳಿಕೆ ನೀಡಿರುವುದನ್ನು ಇದಕ್ಕೆ ಪುರಾವೆಯಾಗಿ ಮಾಧ್ಯಮಗಳು ಬಣ್ಣಿಸುತ್ತಿವೆ. ಸರಿತಾ ಆರೋಪಗಳನ್ನು ತನ್ನ ಅಭಿವೃದ್ಧಿ ಯೋಜನೆಗಳ ಮೂಲಕ ಎದುರಿಸು ಆತ್ಮವಿಶ್ವಾಸ ಮುಖ್ಯಮಂತ್ರಿಯವರಲ್ಲಿದೆ. ಈ ನಡುವೆ ಅಬಕಾರಿ ಸಚಿವ ಕೆ.ಬಾಬು ವಿರುದ್ಧ ಬಾರ್‌ಲಂಚ ಹಗರಣದಲ್ಲಿ ಬಂದಿದ್ದ ತೀರ್ಪಿಗೆ ಹೈಕೋರ್ಟ್ ತಡೆ ನೀಡಿರುವುದು ಯುಡಿಎಫ್‌ಗೆ ಆಶಾದಾಯಕ ಬೆಳವಣಿಗೆಯಾಗಿದ್ದರೂ ಬಿಕ್ಕಟ್ಟಿನ ಆಳ ಅದರಿಂದ ಕಡಿಮೆಗೊಳ್ಳಲಾರದು. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ವಿದ್ಯತ್‌ಸಚಿವ ಆರ್ಯಾಡನ್ ಮುಹಮ್ಮದ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂಬ ವಿಜಿಲೆನ್ಸ್ ಕೋರ್ಟ್ ನೀಡಿದ ಆದೇಶಕ್ಕೆ ಇಂದು ಹೈಕೋರ್ಟ್‌ನಲ್ಲಿ ಸ್ಟೇ ಸಿಗುವ ನಿರೀಕ್ಷೆಯಿದೆ. ಆದರೆ ಅದರಿಂದ ಯುಡಿಎಫ್‌ಗಾದ ಹಾನಿ ಪರಿಹಾರಗೊಳ್ಳುವುದೆಂದು ನಂಬಲು ಸಾಧ್ಯವಿಲ್ಲ. ಸರಿತಾ ಮುಖ್ಯಂತ್ರಿ ವಿರುದ್ಧ ಆರೋಪ ಮುಂದುವರಿಸುತ್ತಿರುವುದು ಕಾರಣವಾಗಿದೆ. ರಾಜಿನಾಮೆ ಬೇಡಿಕೆಯೊಂದಿಗೆ ಪ್ರತಿಪಕ್ಷ ಬೀದಿಗೆ ಇಳಿದಿವೆ. ನಿಯಮಸಭೆ(ಕೇರಳ ವಿಧಾನಸಭೆ)ಸಮ್ಮೇಳನ ಆರಂಭವಾಗಲಿರುವುದರಿಂದ ಬಿಕ್ಕಟ್ಟು ಮತ್ತಷ್ಟುಹೆಚ್ಚುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದು ಕೇರಳದಿಂದ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News