ಬಿಜೆಪಿ ಸಂಸದೆ ಹೇಮಮಾಲಿನಿಗೆ 40 ಕೋಟಿ. ರೂ. ಮೌಲ್ಯದ ನಿವೇಶನ 70 ಸಾವಿರಕ್ಕೆ !
Update: 2016-01-29 12:19 IST
ಹೊಸದಿಲ್ಲಿ, ಜ.29: ಬಿಜೆಪಿ ಎಂಪಿ ಹೇಮಮಾಲಿನಿ ಅವರಿಗೆ ಅಂಧೇರಿಯಲ್ಲಿ ನಾಟ್ಯವಿಹಾರ ಕಲಾ ಕೇಂದ್ರ ಆರಂಭಿಸಲು 40 ಕೋಟಿ ರೂ. ಮೌಲ್ಯದ ನಿವೇಶನ ಕೇವಲ 70 ಸಾವಿರ ರೂ.ಗಳಿಗೆ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ.
ಅಂಧೇರಿಯ ಒಶಿವಾರದಲ್ಲಿ ಡ್ಯಾನ್ಸ್ ಅಕಾಡೆಮಿ(ನಾಟ್ಯ ವಿಹಾರ ಕಾಲ ಕೇಂದ್ರ) ಕಟ್ಟಡ ನಿರ್ಮಿಸಲು ಎರಡು ಸಾವಿರ ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು ಅತ್ಯಂತ ಕನಿಷ್ಠ ಮೌಲ್ಯಕ್ಕೆ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಹೇಮಮಾಲಿನಿ 1997ರಲ್ಲಿ ಇನ್ನೊಂದು ನಿವೇಶನ ಪಡೆದಿದ್ದರು. ಆದರೆ ಅದು ಸಿಆರ್‌ಝಡ್ ವ್ಯಾಪ್ತಿಗೊಳಪಟ್ಟ ಹಿನ್ನೆಲೆಯಲ್ಲಿ ಅದನ್ನು ಅಭಿವೃದ್ಧಿ ಮಾಡಿರಲಿಲ್ಲ. ಹೀಗಿದ್ದರೂ ಅದನ್ನು ರಾಜ್ಯ ಸರಕಾರಕ್ಕೆ ವಾಪಾಸು ನೀಡಿರಲಿಲ್ಲ. ಇದೀಗ ಮುಂಬೈ ನಗರ ಜಿಲ್ಲಾಧಿಕಾರಿ ಅವರು ಹಳೆಯ ನಿವೇಶನವನ್ನು ವಾಪಾಸು ನೀಡುವಂತೆ ಹೇಮಮಾಲಿನಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.