×
Ad

ಬ್ರೂನಿ ಸುಲ್ತಾನರ ಸಹೋದರಿಗೆ ಆರು ತಿಂಗಳ ಬ್ರೀಸ್ಟ್ ಚಿಕಿತ್ಸೆ ಫೀಸು120ಕೋಟಿ ರೂ.!

Update: 2016-01-29 12:26 IST

ಲಂಡನ್: ವೈದ್ಯರ ಕೆಲಸ ಇತರ ಕೆಲಸಗಳಿಗಿಂತ ಭಿನ್ನ ಹಾಗೂ ಶ್ರೇಷ್ಠವಾಗಿದೆ. ಅದರೆ ಕೆಲವು ವೈದ್ಯರು ಸ್ವಾರ್ಥ ಲಾಭಕ್ಕಾಗಿ ತಪ್ಪು ದಾರಿ ತುಳಿದ ಉದಾಹರಣೆಗಳೂ ಇವೆ. ಆ ಕಾರಣದಿಂದ ರೋಗಿಯ ಜೀವ ಹಾನಿ ಸಂಭವಿಸಿದ್ದೂ ಇವೆ. ಕೆಲಸದ ಮೌಲ್ಯಗಳಿಗೆ ವಿರುದ್ಧವಾಗಿ ಸಿಂಗಾಪುರದ ವೈದ್ಯೆ ಡಾ. ಸೂಸನ್ ಲಿಂ ಮೇ ಲಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ್ರೂನಿ ಸುಲ್ತಾನರ ಸಹೋದರಿಗೆ ಆರು ತಿಂಗಳು ಬ್ರಿಸ್ಟ್ ಕ್ಯಾನ್ಸರ್ ಚಿಕಿತ್ಸೆಗೆ ಇವರು 120 ಕೋಟಿ ರೂಪಾಯಿಯನ್ನು ನಿಯಮ ಬಾಹಿರವಾಗಿ ವಸೂಲು ಮಾಡಿದ್ದಾರೆ. ಲಂಡನ್ ಜನರಲ್ ಮೆಡಿಕಲ್ ಕೌನ್ಸಿಲ್(ಜಿಎಂಸಿ) ಸದಸ್ಯೆಯಾದ ಇವರು ಜಗತ್ತಿನ ಪ್ರಥಮ ಬದಲಿ ಕರುಳು ಶಸ್ತ್ರ ಚಿಕಿತ್ಸೆ ನಡೆಸಿ ಹೆಸರು ಗಳಿಸಿರುವವರಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಈಗ ಇಂತಹ ಪ್ರತಿಭಾವಂತೆ ವೈದೈಯನ್ನು ಅಯೋಗ್ಯಗೊಳಿಸಲು ಬ್ರಿಟಿಷ್ ಮೆಡಿಕಲ್ ಕೌನ್ಸಿಲ್ ಮುಂದಾಗಿದೆ.

  

ರೊಬೊಟಿಕ್ ಸರ್ಜರಿ ಮತ್ತು ಸ್ಟೈಂ ಸೆಲ್ ಸಂಶೋಧನೆಯಲ್ಲಿಯೂ ಖ್ಯಾತರಾದ ಈ ವೈದ್ಯೆ ವೈದ್ಯಕೀಯ ಮೌಲ್ಯಚ್ಯುತಿಗಾಗಿ ಅಯೋಗ್ಯಾರಾಗುತ್ತಿರುವುದು ವಿಷಾದದ ವಿಚಾರ. ಇವರು ನಡೆಸಿದ ವಂಚನೆ ಬಹಿರಂಗೊಳ್ಳುವುದರೊಂದಿಗೆ ಜಿಎಂಸಿ ತನಿಖಿಸಿ ಅವರನ್ನು ಪ್ರಾಕ್ಟಿಸ್ ಮಾಡದಂತೆ ಮೂರು ವರ್ಷಗಳ ಕಾಲ ಅಮಾನುತುಗೊಳಿಸಿದೆ.ಯಾವತ್ತೂ ಸಮರ್ಥಿಸುವಂತಿಲ್ಲದ ಶುಲ್ಕವನ್ನು ಈ ವೈದ್ಯೆ ಪಡೆದಿದ್ದಾರೆ ಎಂದು ಜಿಎಂಸಿ ಆರೋಪಿಸಿದೆ. ಡಾ. ಲೀ ವಿರುದ್ಧ ಸಿಂಗಾಪುರ ಮೆಡಿಕಲ್ ಕೌನ್ಸಿಲ್ ತನಿಖೆಯೊಂದನ್ನು 2012ರಲ್ಲಿಯೇ ಆರಂಭಿಸಿತ್ತು.2007ರಲ್ಲಿ ಆರು ತಿಂಗಳು ಕಾಲ ಇವರು ಬ್ರೂನೈಯ ಸುಲ್ತಾನ್‌ರ ಸಹೋದರಿಗೆ ಚಿಕಿತ್ಸೆ ನೀಡಿದ್ದರು ಮತ್ತು ದುಬಾರಿ ಶುಲ್ಕವನ್ನು ಪಡೆದಿದ್ದರು ಎಂಬುದು ಇವರ ಮೇಲಿರುವ ಆರೋಪವಾಗಿತ್ತು. ಸಿಂಗಾಪುರ ಮೆಡಿಕಲ್ ಕೌನ್ಸಿಲ್ ತನಿಖೆ ಮೂಲಕ 94 ಕೌಂಟ್‌ಗಳಲ್ಲಿ(ಪರಿಗಣನೆಯಲ್ಲಿ ) ಇವರು ತಪ್ಪಿತಸ್ಥೆ ಎಂದು ಕಂಡುಕೊಂಡಿತ್ತು. ಇವರನ್ನು ಮೂರುವರ್ಷಗಳವರೆಗೆ ಪ್ರಾಕ್ಟಿಸ್ ಮಾಡದಂತೆ ನಿಷೇಧ ಹೇರಲಾಗಿದೆ. 5000 ಪೌಂಡ್ ಜುರ್ಮಾನೆ ವಿಧಿಸಲಾಗಿದೆ. 2013ರಲ್ಲಿ ಇವರು ಸಲ್ಲಿಸಿದ್ದ ಅಪೀಲನ್ನು ಸಿಂಗಾಪುರ ಕೋರ್ಟ್ ವಜಾಮಾಡಿತ್ತು. ಈ ಕುರಿತು ಸಿಂಗಾಪುರದ ಸಿಎಮ್‌ಸಿ ಲಂಡನ್‌ನ ಜಿಎಂಸಿಗೆ ಪತ್ರಬರೆದಿತ್ತು. ಡಾ. ಲೀ ಲಂಡನ್ ಹೈಕೋರ್ಟ್‌ನಲ್ಲಿ ಇದರ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. 2007ರಲ್ಲಾಗಿದೆ ಎಂಬ ಘಟನೆಗೆ ಈಗ ವಿಳಂಬವಾಗಿ ಕ್ರಮಕೈಗೊಳ್ಳುತ್ತಿರುವುದರ ಔಚಿತ್ಯವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತಿದ್ದಾರೆ. ಆದರೆ ಎಸ್‌ಎಂಸಿ ಡಾ. ಲೀ ವಿರುದ್ಧ ಆರೋಪ ಹೊರಿಸುವಾಗ ಅವರು ಲಂಡನ್ ಜಿಎಂಸಿಯಲ್ಲಿ ಡ್ಯೂಟಿಯಲ್ಲಿದ್ದುದು ಅವರ ವಿರುದ್ಧವಿರುವ ಪ್ರಧಾನ ಅಂಶವಾಗಿದ್ದು ಈ ಕಾರಣದಿಂದ ಜಿಎಂಸಿ ಲೀ ವಿರುದ್ಧ ತನಿಖೆಯನ್ನು ಮುಂದುವರಿಸಬಹುದಾಗಿದೆ ಎಂದು ಕೋರ್ಟು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News