×
Ad

ವೇಮುಲಾ ಆತ್ಮಹತ್ಯೆ ಎಸ್ಸಿ-ಎಸ್ಟಿ ಸಂಘದಿಂದ ‘ಪ್ರತಿಭಟನಾ ದಿನ’

Update: 2016-01-29 23:45 IST

ಹೈದರಾಬಾದ್,ಜ.29: ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಕುರಿತು ನಡೆಯುತ್ತಿರುವ ಪ್ರತಿಭಟನೆಗೆ ಸಾಥ್ ನೀಡಿರುವ ಹೈದರಾಬಾದ್ ಕೇಂದ್ರೀಯ ವಿವಿಯ ಎಸ್ಸಿ-ಎಸ್ಟಿ ನೌಕರರ ಕಲ್ಯಾಣ ಸಂಘವು ಶುಕ್ರವಾರ ‘ಪ್ರತಿಭಟನಾ ದಿನ’ವನ್ನು ಆಚರಿಸಿತು.

ಎಸ್ಸಿ-ಎಸ್ಟಿ ಶಿಕ್ಷಕರ ವೇದಿಕೆ ಮತ್ತು ಸಂಬಂಧಿತ ಶಿಕ್ಷಕರು ಗುರುವಾರ ಆರಂಭಗೊಂಡ ತಮ್ಮ ಸರದಿ ಉಪವಾಸ ಮುಷ್ಕರವನ್ನು ಶುಕ್ರವಾರವೂ ಮುಂದುವರಿಸಿದರು.
ಕುಲಪತಿ ಅಪ್ಪಾರಾವ್ ಪೊಡಿಲೆ ಅವರನ್ನು ವಜಾಗೊಳಿಸಬೇಕು ಮತ್ತು ಪ್ರಭಾರ ಕುಲಪತಿ ವಿಪಿನ್ ಶ್ರೀವಾಸ್ತವ ಅವರು ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ವೇದಿಕೆಯ ಸದಸ್ಯರು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಪತ್ರವನ್ನು ಬರೆದಿದ್ದಾರೆ ಎಂದು ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಕ್ರಿಯಾ ಸಮಿತಿ(ಜೆಎಸಿ)ಯ ಪ್ರತಿನಿಧಿಯೋರ್ವರು ತಿಳಿಸಿದರು.
ವೇಮುಲಾ ಅವರ ಜನ್ಮದಿನದ ಮುನ್ನಾದಿನವಾದ ಶುಕ್ರವಾರ ಜೆಎಸಿಯು ಮೋಂಬತ್ತಿ ಬೆಳಕಿನಲ್ಲಿ ಜಾಗರಣೆ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು.
ಇದೇ ವೇಳೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಲು ವಿದ್ಯಾರ್ಥಿಗಳ ಎರಡು ತಂಡಗಳು ಅನಿರ್ದಿಷ್ಟಾವಧಿ ಉಪವಾಸವನ್ನು ಆರಂಭಿಸಿದವು.
 ತನ್ನ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲು ಫೆಬ್ರವರಿ ಮೊದಲ ವಾರದಲ್ಲಿ ದಿಲ್ಲಿಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಲು ಜೆಎಸಿ ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News