×
Ad

ರಾಮ ಮಂದಿರದಿಂದ ಬಡವರಿಗೆ ಪ್ರತಿಹೊತ್ತಿನ ಊಟ ಸಿಗುತ್ತದೆಯೇ? ಮೋಹನ್ ಭಾಗ್ವತ್ ಗೆ ವಿದ್ಯಾರ್ಥಿಗಳ ಪ್ರಶ್ನೆ!

Update: 2016-01-30 21:38 IST

ಮುಂಬೈ , ಜ 3೦ :

ಪ್ರಶ್ನೆ : ರಾಮ ಮಂದಿರ ನಿರ್ಮಾಣವಾದರೆ ದೇಶದ ಬಡವರಿಗೆ ಪ್ರತಿಹೊತ್ತಿನ ಊಟ ಸಿಗುತ್ತದೆಯೇ ?

ಉತ್ತರ : ಈಗ ರಾಮ ಮಂದಿರ ನಿರ್ಮಾಣವಾಗದೆ ಇದ್ದಾಗ ಅವರಿಗೆ ಸರಿಯಾಗಿ ಅವರ ರೊಟ್ಟಿ ಸಿಗುತ್ತಿದೆಯೇ ?

ಮಹಾರಾಷ್ಟ್ರ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿತ ವಿದ್ಯಾರ್ಥಿ ಸಂಸತ್ತಿನಲ್ಲಿ ಕೇಳಿ ಬಂದ ಪ್ರಶ್ನೋತ್ತರವಿದು. ಪ್ರಶ್ನೆ ಕೇಳಿದವರು ವಿದ್ಯಾರ್ಥಿಗಳು , ಕೇಳಿದ್ದು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಅವರಿಗೆ. ಅದಕ್ಕವರು ಪ್ರತಿಪ್ರಶ್ನೆಯನ್ನೇ ಮುಂದಿಟ್ಟರು !

ಆರೆಸ್ಸೆಸ್ ಭಾರತದ ಸಂವಿಧಾನವನ್ನು ವಿರೋಧಿಸುವುದಿಲ್ಲ. ಈ ದೇಶದಲ್ಲಿ ಸಾಮಾಜಿಕ ತಾರತಮ್ಯ ಇರುವವರೆಗೆ ಮೀಸಲಾತಿ ಇರಬೇಕು. ಆದರೆ ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ಗೊಳಿಸಬೇಕು ಎಂದು ಅವರು ಹೇಳಿದರು. 

ಧರ್ಮಾಧಾರಿತ ರಾಜಕೀಯದ ಬಗ್ಗೆ ಕೇಳಿದ್ದಕ್ಕೆ ಇದು ನನಗೆ ಸಂಬಂಧಪಟ್ಟ ಪ್ರಶ್ನೆಯಲ್ಲ, ಇದನ್ನು ಸಂಬಂಧಪಟ್ಟವರಿಗೆ ಕೇಳಿ ಎಂದು ಭಾಗ್ವತ್ ಜಾರಿಕೊಂಡರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News