×
Ad

ಖೈದಿಗಳ ಕುರಿತು ಜೈಲಿಂದ ಬಂದ ನಂತರ ಚಿತ್ರ: ಸಂಜಯ್ ದತ್

Update: 2016-01-31 16:12 IST

ಮುಂಬೈ: ಸಂಜಯ್ ದತ್ ಫೆಬ್ರವರಿ 25ಕ್ಕೆ ಯರವಾಡ ಜೈಲಿಂದ ಬಿಡುಗಡೆಗೊಳ್ಳಲಿದ್ದಾರೆ. ಆನಂತರ ಅವರು ರಾಜ್‌ಕುಮಾರ್ ಹಿರಾನಿ ಜೊತೆ ಮುನ್ನಾಭಾಯಿ ಸೀರೀಸ್‌ನ ಮುಂದಿನ ಸಿನೆಮಾ ಮತ್ತು ತನ್ನ ಬಯೋಪಿಕ್‌ನ ಶೂಟಿಂಗ್‌ನಲ್ಲಿ ನಿರತರಾಗಲಿದ್ದಾರೆ.

ಮೂಲಗಳ ಪ್ರಕಾರ ಈ ಎರಡು ಸಿನೆಮಾವಲ್ಲದೆ ಸಿನೆಮಾ ನಿರ್ಮಾಣವನ್ನು ಮಾಡಲಿದ್ದಾರೆ. ಅದು ಅವರ ಜೈಲಿನ ಜೊತೆಗಾರರ ಕುರಿತು ಆಗಿರುವುದು. ಅವರು ಅಲ್ಲಿ ಕೈದಿಗಳಿಂದ ಕೇಳಿದ ಕತೆಗಳನ್ನು ತೆರೆಯ ಮೇಲೆ ತರಲಿದ್ದಾರೆ. ಕೌಟುಂಬಿಕ ವಿವಾದದಲ್ಲ ಜೈಲುಸೇರಿದ ಕೈದಿಯೊಬ್ಬನ ಕತೆಆಧರಿಸಿ ಚಿತ್ರ ತೆಗೆಯಲಿದ್ದಾರೆ. ಶೂಟಿಂಗ್ ಜೈಲಿನಲ್ಲಿ ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News