×
Ad

ಸೀತೆಯನ್ನು ಹೊರದಬ್ಬಿದ ಶ್ರೀರಾಮನ ವಿರುದ್ಧ ನ್ಯಾಯಾಲಯಕ್ಕೆ ದೂರು !

Update: 2016-01-31 20:29 IST

ಹೊಸದಿಲ್ಲಿ, ಜ.31: ಪುರಾಣಪುರುಷ, ಭಗವಾನ್ ಶ್ರೀರಾಮನ ವಿರುದ್ಧವೇ ನ್ಯಾಯವಾದಿಯೊಬ್ಬರು ದೂರುದಾಖಲಿಸಿದ ಘಟನೆ ಬಿಹಾರದ ಸೀತಾಮಧಿ ಜಿಲ್ಲೆಯಿಂದ ವರದಿಯಾಗಿದೆ. ತಮ್ಮ ದಾಂಪತ್ಯದ ಬಗ್ಗೆ ಅಗಸನೊಬ್ಬನು ಆಡಿದ ಮಾತು ಕೇಳಿ ಶ್ರೀರಾಮಚಂದ್ರನು, ತನ್ನ ಪತ್ನಿ ಸೀತೆಯನ್ನು ಮನೆಯಿಂದ ಹೊರದಬ್ಬುವ ಮೂಲಕ ಆಕೆಗೆ ಚಿತ್ರಹಿಂಸೆ ನೀಡಿದ್ದಾನೆಂದು, ಸೀತಾಮಧಿಯ ನ್ಯಾಯವಾದಿ ಠಾಕೂರ್ ಚಂದನ್‌ಕುಮಾರ್‌ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಪತ್ನಿಯ ಬಗ್ಗೆ ಶ್ರೀರಾಮಚಂದ್ರನು ತುಂಬಾ ಹೃದಯಹೀನತೆಯಿಂದ ವರ್ತಿಸಿದ್ದಾನೆಂದು ನ್ಯಾಯವಾದಿ ಹೇಳಿದ್ದಾರೆ.

  ಯಾರದೇ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡುವ ಉದ್ದೇಶತನಗಿಲ್ಲ. ಆದರೆ ಸೀತೆಗೆ ನ್ಯಾಯದೊರೆಯಬೇಕೆಂಬುದೇ ತನ್ನ ಉದ್ದೇಶವಾಗಿದೆಯೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಶ್ರೀರಾಮನ ಆಳ್ವಿಕೆಯ ಕಾಲವಾದ ತ್ರೇತಾಯುಗ ದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ಆರಂಭಗೊಂಡಿತೆಂದು ಚಂದನ್ ವಾದಿಸಿದ್ದಾರೆ. ತ್ರೇತಾಯುಗದ ಮಹಿಳೆಯರಿಗೇ ನ್ಯಾಯವು ದೊರೆಯದಿದ್ದಲ್ಲಿ,ಅದು ಕಲಿಯುಗದ ಮಹಿಳೆಯರಿಗೂ ಸಿಗಲಾರದು ಎಂದು ಅವರು ಪ್ರತಿಪಾದಿಸಿದ್ದಾರೆ.

 ನ್ಯಾಯವಾದಿ ಚಂದನ್ ಅವರ ದೂರು, 2012ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅಭಿನಯದ ‘ಓ ಮೈ ಗಾಡ್’ ಚಿತ್ರದೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಓ ಮೈ ಗಾಡ್ ಚಿತ್ರದಲ್ಲಿ, ವಿಗ್ರಹ ವ್ಯಾಪಾರಿಯೊಬ್ಬನು, ಪ್ರಕೃತಿವಿಕೋಪಕ್ಕಾಗಿ ಭಗವಂತನ ವಿರುದ್ಧವೇ ಪ್ರಕರಣವನ್ನು ದಾಖಲಿಸುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News