×
Ad

ಬಾಲಪರಾಧ ಕಾಯ್ದೆ ವಿರುದ್ಧ ಪಿಐಎಲ್

Update: 2016-01-31 23:26 IST

 ಹೊಸದಿಲ್ಲಿ, ಜ.31: ಕೊಲೆ ಹಾಗೂ ಅತ್ಯಾಚಾರದಂತಹ ಹೇಯ ಅಪರಾಧ ಪ್ರಕರಣಗಳಲ್ಲಿ 16 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸಲು ಅವಕಾಶ ನೀಡುವ, ಬಾಲಪರಾಧ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
    ಕಾಂಗ್ರೆಸ್ ನಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ತಹ್‌ಸೀನ್ ಪೂನಾವಾಲ ಈ ಬಗ್ಗೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿದ್ದು, ನೂತನ ಬಾಲಪರಾಧ ಕಾಯ್ದೆಯು ಅತಾರ್ಕಿಕ, ಏಕಪಕ್ಷೀಯವಾಗಿದೆ ಹಾಗೂ ಸಂವಿಧಾನದ 14ನೆ ನಿಯಮ (ಸಮಾನತೆಯ ಹಕ್ಕು)ದ ಉಲ್ಲಂಘನೆಯಾಗಿದೆಯೆಂದು ವಾದಿಸಿದ್ದಾರೆ.
 ತಿದ್ದುಪಡಿಗೊಳಿಸಲಾದ ಬಾಲಾಪರಾಧ ಕಾಯ್ದೆಯು, ಮಕ್ಕಳ ಹಕ್ಕುಗಳ ಕುರಿತ ಜಿನೇವಾ ಒಡಂಬಡಿಕೆಯ ಆಶಯಕ್ಕೆ ವಿರುದ್ಧವಾಗಿದೆ ಹಾಗೂ ಮಕ್ಕಳ ಮತ್ತು ವಯಸ್ಕ ಅಪರಾಧಿಗಳ ಹಕ್ಕುಗಳ ರಕ್ಷಣೆಯ ವಿರೋಧಿಯಾಗಿದೆಯೆಂದು ತಹ್‌ಸೀನ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.

2015ರ ಚಳಿಗಾಲದ ಅಧಿವೇಶನದಲ್ಲಿ ಬಾಲ ನ್ಯಾಯ(ತಿದ್ದುಪಡಿ) ತಿದ್ದುಪಡಿ ಕಾಯ್ದೆಯನ್ನು ಅಂಗೀಕರಿಸಲಾಗಿತ್ತು. ಹೇಯ ಅಪರಾಧ ಪ್ರಕರಣಗಳಲ್ಲಿ 16 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರನ್ನು, ಬಾಲಪರಾಧಿಯೆಂದು ಪರಿಗಣಿಸಿ, ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕೇ ಅಥವಾ ಆತನನ್ನು ವಯಸ್ಕನೆಂದು ಪರಿಗಣಿಸಬೇಕೇ ಎಂಬ ಬಗ್ಗೆ ಬಾಲನ್ಯಾಯ ಮಂಡಳಿಯು ಪ್ರಾಥಮಿಕ ತನಿಖೆಯನ್ನು ನಡೆಸಲು ಈ ಕಾಯ್ದೆಯು ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News