×
Ad

ಹೊಸದಿಲ್ಲಿ; ಭಾರತದ ಸಶಸ್ತ್ರ ಸೀಮಾ ಬಲ್ ಪ್ರಪ್ರಥಮ ಮಹಿಳಾ ಮುಖ್ಯಸ್ಥೆ - ಅರ್ಚನಾ ರಾಮಸುಂದರಮ್

Update: 2016-02-01 21:04 IST

ಹೊಸದಿಲ್ಲಿ , ಫೆ. ೧ : ಭಾರತದ ಸಶಸ್ತ್ರ ಸೀಮಾ ಬಲ್ ಮುಖ್ಯಸ್ಥರಾಗಿ ಅರ್ಚನಾ ರಾಮಸುಂದರಮ್ ನೇಮಕವಾಗಿದ್ದಾರೆ. ಪ್ಯಾರಮಿಲಿಟರಿ ಪಡೆಗೆ ಇದೇ ಮೊದಲ ಬಾರಿ ಮಹಿಳಾ ಮುಖ್ಯಸ್ಥರ ನೇಮಕವಾಗಿದೆ. ೧೯೮೦ ರ ಐಪಿಎಸ್ ಬ್ಯಾಚ್ ಅಧಿಕಾರಿಯಾಗಿರುವ ಅರ್ಚನಾ ತಮಿಳು ನಾಡು ಕ್ಯಾಡರ್ ನವರು. ಈ ಹಿಂದೆ ಅವರು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಭಾರತದ ನೇಪಾಳ ಹಾಗು ಭೂತಾನ್ ಗಡಿ ರಕ್ಷಣೆ ಈ ಪಡೆಯ ಮುಖ್ಯ ಕರ್ತವ್ಯವಾಗಿದೆ. 

ಇದೇ ಸಂದರ್ಭದಲ್ಲಿ ಈ ಹಿಂದೆ ಎಸ್ಪಿಜಿ ಮುಖ್ಯಸ್ಥರಾಗಿದ್ದ ಕೆ. ದುರ್ಗಾ ಪ್ರಸಾದ್ ಅವರನ್ನು ಸಿ ಆರ್ ಪಿ ಎಫ್ ನ ಮಹಾ ನಿರ್ದೇಶಕರಾಗಿ ನೇಮಿಸಲಾಗಿದೆ. ಅವರು ಈಗಾಗಲೇ ಸಿ ಆರ್ ಪಿ ಎಫ್ ವಿಶೇಷ ಮಹಾ ನಿರ್ದೇಶಕರಾಗಿ ಕರ್ತವ್ಯದಲ್ಲಿದ್ದು ಪೂರ್ಣ ಪ್ರಮಾಣದ ಮಹಾ ನಿರ್ದೇಶಕರಾಗಿ ಈ ತಿಂಗಳಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News