×
Ad

ಬೊಕೊ ಹರಾಂ ದಾಳಿ

Update: 2016-02-01 23:44 IST

ಡಲೋರಿ (ನೈಜೀರಿಯ), ಫೆ. 1: ನೈಜೀರಿಯದ ಡಲೋರಿ ಗ್ರಾಮದ ಮೇಲೆ ಶನಿವಾರ ರಾತ್ರಿ ಬೊಕೊ ಹರಾಂ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 86 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
 ಡಲೋರಿ ಗ್ರಾಮ ಮತ್ತು ಸಮೀಪದ ಎರಡು ನಿರಾಶ್ರಿತ ಶಿಬಿರಗಳ ಮೇಲೆ ಉಗ್ರರು ನಡೆಸಿದ ದಾಳಿ ಭಯಾನಕವಾಗಿತ್ತು. ಉಗ್ರರು ಸುಮಾರು ನಾಲ್ಕು ಗಂಟೆಗಳ ಕಾಲ ಮಾರಣ ಹೋಮ ನಡೆಸಿದರು. ಮನಬಂದಂತೆ ಗುಂಡು ಹಾರಿಸಿದರು, ಬೆಂಕಿ ಕೊಟ್ಟರು ಹಾಗೂ ಮೂರು ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡರು ಎಂದು ದಾಳಿಯಲ್ಲಿ ಬದುಕುಳಿದವರೊಬ್ಬರು ಹೇಳಿದರು.
ಸಮೀಪದ ಗಮೋರಿ ಗ್ರಾಮಕ್ಕೆ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದ ಹಲವಾರು ಜನರನ್ನು ಗುರಿಯಾಗಿಸಿಕೊಂಡು ಮೂವರು ಮಹಿಳಾ ಆತ್ಮಹತ್ಯಾ ಬಾಂಬರ್‌ಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡರು ಎಂದು ಸ್ಥಳದಲ್ಲಿದ್ದ ಸೈನಿಕರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News