ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಚಾಲನೆ
Update: 2016-02-03 13:20 IST
ಬೆಂಗಳೂರು, ಫೆ.3: ನಗರದ ಅರಮನೆ ಮೈದಾನದಲ್ಲಿ ಆರಂಭಗೊಂಡಿರುವ ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು (ಇನ್ವೆಸ್ಟ್ ಕರ್ನಾಟಕ 2016') ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಉದ್ಘಾಟಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ್ ಕುಮಾರ್, ಕೈಗಾರಿಕಾ ಸಚಿವ ಆರ್. ವಿ.ದೇಶಪಾಂಡೆ , ಉದ್ಯಮಿ ರತನ್ ಟಾಟಾ, ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ,ಹೆಸರಾಂತ ಉದ್ಯಮಿ ಕುಮಾರಮಂಗಲಂ ಬಿಲ್ರಾ, ಅಜೀಂಪ್ರೇಮ್ ಜಿ, ಅನಿಲ್ ಅಂಬಾನಿ, ಕಿರಣ್ ಮಜುಂದಾರ್ ಶಾ, ಸಜ್ಜನ್ ಜಿಂದಾಲ್ ಸೇರಿದಂತೆ ಹಲವು ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ