×
Ad

ಸಿಯಾಚಿನ್: ಹಿಮಪಾತದಲ್ಲಿ ಸಿಲುಕಿರುವ ಹತ್ತು ಯೋಧರು

Update: 2016-02-03 23:56 IST

 ಜಮ್ಮು,ಫೆ.3: ಜಮ್ಮು-ಕಾಶ್ಮೀರದ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಮಿಲಿಟರಿ ನೆಲೆಯೊಂದು ಹಿಮಪಾತಕ್ಕೆ ಸಿಲುಕಿದ್ದು, ಓರ್ವ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ ಸೇರಿದಂತೆ ಹತ್ತು ಸೇನಾಸಿಬ್ಬಂದಿ ಹಿಮದ ರಾಶಿಯಡಿ ಸಿಲುಕಿ ಕೊಂಡಿದ್ದಾರೆ. ಬುಧವಾರ ಬೆಳಗಿನ ಜಾವ ಲಡಾಖ್ ಪ್ರದೇಶದ ಉತ್ತರ ಗ್ಲೇಸಿಯರ್ ವಿಭಾಗದಲ್ಲಿ 19,000 ಅಡಿ ಎತ್ತರದಲ್ಲಿರುವ ಸೇನಾ ನೆಲೆಗೆ ಹಿಮಪಾತ ಅಪ್ಪಳಿಸಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ಎಸ್.ಡಿ.ಗೋಸ್ವಾಮಿ ತಿಳಿಸಿದರು.

ಸೇನೆ ಮತ್ತು ವಾಯುಪಡೆ ಹಿಮರಾಶಿಯಲ್ಲಿ ಸಿಲುಕಿ ಕೊಂಡಿರುವ ಯೋಧರ ರಕ್ಷಣೆಗಾಗಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News