ರಸ್ತೆ ಹೊಂಡಗಳನ್ನು ಮುಚ್ಚಿ ಮಗನಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ತಂದೆ.

Update: 2016-02-04 08:04 GMT

ಮುಂಬೈ: ಇಲ್ಲಿನ ವಾಹನದಟ್ಟಣೆಯ ಹೈವೆ ರಸ್ತೆಯಲ್ಲಿ ಬರಿ ಕೈಗಳಿಂದ ಅಪಘಾತಕ್ಕೆ ಕಾರಣವಾಗಬಲ್ಲ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ದಾದಾ ರಾವ್ ಬಿಲ್ಹೊರೆ  ಮುಂದಾಗಿದ್ದಾರೆ. ತನ್ನ ಮಗನಿಗಾದ ಗತಿ ಇನ್ನು ಯಾರಿಗೂ ಆಗದಿರಲಿ ಎಂದು ಅವರು ಈ ಕೆಲಸಕ್ಕಿಳಿದಿರುವುದು. ಅವರು ಹೋಗುವಾಗ ಎಲ್ಲೆಲ್ಲಿ ಇಂತಹ ಹೊಂಡಗಳು ಗಟಾರಗಳು ಕಾಣಿಸಿದರೆ ಸಾಕು ದಾದಾ ರಾವ್  ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ವಾಹನಗಳು ಬರತ್ತಿವೆಯೆಂದೋ ಅಥವಾ ತಕ್ಕ ಸಮಯವನ್ನೋ ಅವರು ನೋಡುವುದಿಲ್ಲ. ಇಟ್ಟಿಗೆ, ಹೊಯ್ಗೆ, ಟಾಫಿ ತೆಗೆದು ಹೊಂಡಮುಚ್ಚುವ ಕೆಲಸವನ್ನು ಆರಂಭಿಸಿಬಿಡುತ್ತಾರೆ. ಇದೊಂದು ಶೋಕಿಯೋ ಹುಚ್ಚೋ ಅಲ್ಲ. ತಿಂಗಳ ಹಿಂದೆ ಅವರ ಪ್ರಿಯ ಪುತ್ರನನ್ನು ಒಂದು ಗಟಾರ ಬಲಿ ತೆಗೆದುಕೊಂಡಿತ್ತು.

ಆನಂತರ ರಸ್ತೆಯ ಹೊಂಡಗಳು ಎಷ್ಟು ಅಪಾಯಕಾರಿ ಎಂದು ಅವರಿಗೆ ಮನವರಿಕೆಯಾಗಿತ್ತು. ಆದ್ದರಿಂದ ಅವುಗಳ ಕಾರಣದಿಂದ ಇನ್ನು ಮುಂದೆ ಯಾರ ಜೀವವೂ ಹೋಗಬಾರದು ಎಂಬ ಕಳಕಳಿಯಿಂದ ಈ ಕೆಲಸವನ್ನು ಅವರು ಮುಂದುವರಿಸುತ್ತಿದ್ದಾರೆ. ಪಾಲಿಟೆಕ್ನಿಕ್ ಕಾಲೇಜ್‌ನಲ್ಲಿ ಅಡ್ಮಿಶನ್ ಮಾಡಿಸಿ ಮರಳಿ ಬರುವಾಗ ಕಳೆದ ಜುಲೈಯಲ್ಲಿ ದಾದಾ ರಾವ್  ರ ಹದಿನಾರು ವರ್ಷದ ಮಗ ಪ್ರಕಾಶ್ ಅಫಘಾತಕ್ಕೊಳಗಾಗಿದ್ದ. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಸಲಿಕ್ಕಾಗಿರಲಿಲ್ಲ. ವಿಜಯ್‌ನಗರ್‌ನಲ್ಲಿ ತರಕಾರಿ ಮಾರಿ ದದ್‌ರಾವ್ ಕುಟುಂಬವನ್ನು ಸಾಕುತ್ತಿದ್ದಾರೆ. ಆದರ ನಡುವೆ ಸಮಯ ಮಾಡಿಕೊಂಡು ಕೆಲವು ತಿಂಗಳಿಂದ ನಗರದ ಪ್ರಧಾನ ರಸ್ತೆಗಳ ಹೊಂಡ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಮಗನನ್ನು ಕಳಕೊಂಡ ದುಖವನ್ನು ಇನ್ನುಸಹಾ ಅವರಿಂದ ಮರೆಯಲು ಸಾಧ್ಯವಾಗಿಲ್ಲ. ಜೀವನದಲ್ಲಿ ಇಂತಹ ಕೆಲವು ಘಟನೆಗಳು ಮನುಷ್ಯನನ್ನು ಎಷ್ಟು ಉದಾರಿಯಾಗಿ ಮಾಡುತ್ತಿವೆಎಂಬುದಕ್ಕೆ ದಾದಾ ರಾವ್ ಕೂಡಾ ಒಂದು ಉದಾಹರಣೆ ಆಗುತ್ತಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News