ಪ್ರಧಾನಿಯವರೇ ಅಯೋಧ್ಯೆಗೆ ಹೋಗಿ ಒಂದು ಸೆಲ್ಫಿ ತೆಗೆಯಿರಿ! : ವಿಶ್ವಹಿಂದೂ ಪರಿಷತ್
ಅಲಹಾಬಾದ್: ನೀವು ಅಯೋಧ್ಯೆಗೆ ಹೋಗಿ ರಾಮ ಜನ್ಮಭೂಮಿಯಲ್ಲಿ ಒಂದು ಸೆಲ್ಫಿ ತೆಗೆಯಿರಿ ಎಂದು ವಿಶ್ವಹಿಂದೂ ಪರಿಷತ್ ಪ್ರಧಾನಿ ಮೋದಿಗೆ ಸಲಹೆ ನೀಡಿದೆ. ಅದು ನರೇಂದ್ರ ಮೋದಿ ಅಯೋಧ್ಯೆ ವಿಚಾರದಲ್ಲಿ ತೋರಿಸುತ್ತಿರುವ ಮೌನವನ್ನು ತೊರೆಯಬೇಕು ಎಂದಿದೆಯಲ್ಲದೆ, ಸರಕಾರ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಬದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಬೇಕೆಂದು ಮೋದಿಯವರನ್ನು ಆಗ್ರಹಿಸಿದಂತಿದೆ. ವಿಹಿಂಪದ ಕೇಂದ್ರೀಯ ಮಾರ್ಗದರ್ಶಕ ಮಂಡಲ್‌ನ ಬೈಠಕೊಂದು ಈ ಸೆಲ್ಫಿ ಸಲಹೆಯನ್ನು ಮೋದಿಗೆ ನೀಡಿರುವುದು. ಆಮೂಲಕ ಕೇಂದ್ರದ ಬಿಜೆಪಿ ನೇತೃತ್ವದಲ್ಲಿರುವ ಎನ್‌ಡಿಎ ಸರಕಾರ ರಾಮ ಮಂದಿರ ನಿರ್ಮಾಣ ಕುರಿತ ಸ್ಪಷ್ಟ ಸಂದೇಶ ನೀಡಬೇಕೆಂದು ಅದು ಬಯಸುತ್ತಿದೆ.
ವಿಶ್ವಹಿಂದೂ ಪರಿಷತ್‌ನ ದೊಡ್ಡ ದೊಡ್ಡ ಪದಾಧಿಕಾರಿಗಳುಈ ಬೈಠಕ್‌ನಲ್ಲಿ ಪಾಲ್ಗೋಂಡಿದ್ದರು. ಅದು ಗೋಹತ್ಯೆ ಹೆಚ್ಚುತ್ತಿರುವುದರ ಬಗ್ಗೆಯೂ ಆತಂಕವನ್ನು ವ್ಯಕ್ತಪಡಿಸಿದೆ. ವಿಹಿಂಪದ ಹಿರಿಯ ನಾಯಕ ರಾಮ್ ವಿಲಾಸ್ ವೇದಾಂತಿ, ಹಿಂದೂ ಸಮುದಾಯದ ಬೆಂಬಲ ಪಡೆದಿರುವ ಮೋದಿ ಅಯೋಧ್ಯೆ ವಿಚಾರದಲ್ಲಿ ಮೌನ ಪಾಲಿಸುವುದು ಒಳ್ಳೆಯದಲ್ಲ. ಅವರು ಇತರ ಧರ್ಮಗಳ ತೀರ್ಥಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಸೆಲ್ಫಿ ಕೂಡಾ ತೆಗೆದಿದ್ದಾರೆ. ಈಗ ಅಯೋಧ್ಯೆಗೆ ಹೋಗಿ ಅಲ್ಲಿ ಸೆಲ್ಫಿ ತೆಗೆಯುವ ಸಮಯ ಸಂಜಾತವಾಗಿದೆ" ಎಂದು ಅವರು ತಿಳಿಸಿದ್ದಾರೆ.