×
Ad

ಸಿರಿಯ ಯುದ್ಧದ ನಷ್ಟ 3,500 ಕೋಟಿ ಡಾಲರ್

Update: 2016-02-05 20:40 IST

ವಾಶಿಂಗ್ಟನ್, ಫೆ. 5: ಸಿರಿಯದ ಆಂತರಿಕ ಯುದ್ಧ ಹಾಗೂ ಸಮೀಪದ ದೇಶಗಳ ಮೇಲೆ ಅದು ಬೀರಿದ ವಿನಾಶಕಾರಿ ಪರಿಣಾಮದಿಂದಾದ ಆರ್ಥಿಕ ನಷ್ಟ 3,500 ಕೋಟಿ ಡಾಲರ್ ಆಗಿದೆ ಹಾಗೂ ಅದು ನಿರಂತರವಾಗಿ ಹೆಚ್ಚುತ್ತಿದೆ ಎಂದು ವಿಶ್ವಬ್ಯಾಂಕ್ ಗುರುವಾರ ಹೇಳಿದೆ.
 ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದ ಕುರಿತ ವಿಶ್ವಬ್ಯಾಂಕ್‌ನ ತ್ರೈಮಾಸಿಕ ವರದಿಯಲ್ಲಿ ಈ ಅಂದಾಜನ್ನು ಮಾಡಲಾಗಿದೆ.
‘‘ಸಿರಿಯ ಯುದ್ಧ ಹಾಗೂ ಟರ್ಕಿ, ಲೆಬನಾನ್, ಜೋರ್ಡಾನ್, ಇರಾಕ್ ಮತ್ತು ಈಜಿಪ್ಟ್‌ಗಳ ಮೇಲೆ ಅದು ಬೀರಿದ ಪರಿಣಾಮದಿಂದಾದ ನಷ್ಟ 3,500 ಕೋಟಿ ಡಾಲರ್ ಎಂಬುದಾಗಿ ಅಂದಾಜಿಸಲಾಗಿದೆ’’ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News