ಆರ್ ಬಿ ಐ ಯಿಂದ 5000ರೂ. ಮತ್ತು 10,000ರೂ. ನೋಟುಗಳ ಪ್ರಸ್ತಾವ
ಕಪ್ಪು ಹಣದಲ್ಲಿ ಹೆಚ್ಚಳವಾಗಬಹುದೆಂದು ವಿರೋಧಿಸಿದ 'ಇನ್‌ಕಂ ಟ್ಯಾಕ್ಸ್' ವಿಭಾಗ!
ಹೊಸದಿಲ್ಲಿ; ನೀವು 500,1000ರೂಪಾಯಿ ನೋಟನ್ನು ನೋಡಿದ್ದೀರಿ. ಆದರೆ 5,000 ಮತ್ತು 10,000 ನೋಟು ನೋಡಿರಲಾರಿರಿ. ಆದರೆ ಇದು ನಿಮ್ಮ ಕೈಗೆ ಬಹಳ ಬೇಗ ತಲುಪಲಿದೆ. ಒಂದು ನ್ಯೂಸ್ ಚ್ಯಾನೆಲ್ ಮೂಲಕ ಸಿಕ್ಕ ಮಾಹಿತಿಯಂತೆ ರಿಸರ್ವ್ ಬ್ಯಾಂಕ್ ದೊಡ್ಡ ಮೌಲ್ಯದ ನೋಟನ್ನು ಮುದ್ರಿಸುವ ಪ್ರಸ್ತಾವವನ್ನು ತಯಾರಿಸಿದ್ದು ಹಣಕಾಸು ಸಚಿವಾಲಯದಿಂದ ಅಭಿಪ್ರಾಯವನ್ನು ಕೇಳಿದೆ.
ಸಚಿವಾಲಯದಿಂದ ಹಸಿರು ನಿಶಾನೆ ಸಿಕ್ಕರೆ ಇಂದಿನ ಕೋಟಿಗಳಲ್ಲಿ ವ್ಯವಹರಿಸುವವರಿಗೆ ಭಾರೀ ಸುಲಭ ಆಗಲಿದೆ. ಚಿಕ್ಕ ಸೂಟ್‌ಕೇಸ್‌ನಲ್ಲಿ ಕೊಟ್ಯಾಂತರ ರೂ. ತುಂಬಿಸಿಟ್ಟು ತಮ್ಮ ವ್ಯವಹಾರವನ್ನು ಮುಂದುವರಿಸಬಹುದು. ರಿಸರ್ವ್ ಬ್ಯಾಂಕ್ ಇಷ್ಟು ದೊಡ್ಡ ಮೌಲ್ಯ ನೋಟು ತಯಾರಿಸಬೇಕಿರುವುದಕ್ಕೆ ದುಬಾರಿಯಾಗಿರುವ ವಸ್ತುಗಳ ಧಾರಣೆಯನ್ನು ಕಾರಣವಾಗಿ ಸೂಚಿಸಿದೆ. ಜೊತೆಗೆ ದೊಡ್ಡ ನೋಟು ತಯಾರಿಸುವುದರಿಂದ ನೋಟು ಮುದ್ರಿಸುವ ವೆಚ್ಚವನ್ನು ನಿಯಂತ್ರಿಸಬಹುದಾಗಿದೆ ಎಂದು ಅದು ಸೂಚಿಸಿದೆ. ಆದರೆ ರಿಸರ್ವ್‌ಬ್ಯಾಂಕ್‌ನ ಈ ಪ್ರಸ್ತಾವವನ್ನು ಇನ್‌ಕಂಟ್ಯಾಕ್ಸ್ ವಿಭಾಗ ವಿರೋಧಿಸಿದೆ. ದೊಡ್ಡ ನೋಟು ಬಂದರೆ ಕಪ್ಪು ಹಣದಲ್ಲಿ ಏರಿಕೆ ಸಂಭವಿಸಬಹುದು ಎಂದು ಭಾವಿಸಿದೆ. ಅಲ್ಲದೆ ನಕಲಿ ವ್ಯವಹಾರವನ್ನು ಪತ್ತೆಹಚ್ಚುವುದು ಕಷ್ಟಕರವಾಗಲಿದೆ. ಈ ಎಲ್ಲ ವಿರೋಧವನ್ನು ವೀರಿ ಆರ್‌ಬಿಐ ಯೋಜನೆ ಕಾರ್ಯಗತವಾದರೆ ಎಲ್ಲದಕ್ಕೂ ಉಪಯುಕ್ತವಾಗಬಹುದು. ಕಪ್ಪು ಹಣ ಸಂಗ್ರಹಕ
ದೊಡ್ಡ ವ್ಯವಹಾರಕ್ಕೂ ದೊಡ್ಡ ನೋಟುಗಳು ಖಂಡಿತ ವರದಾನವಾಗಲಿದೆ