ರಾಮ ಮಂದಿರ ನಿರ್ಮಾಣಕ್ಕೆ ವಿಎಚ್‌ಪಿ ಸಂತರ ಅಂತಿಮ ಗಡುವು, ಗೋವು 'ರಾಷ್ಟ್ರೀಯ ಪ್ರಾಣಿ" ಘೋಷಿಸಲು ಆಗ್ರಹ
ಅಹ್ಮದಾಬಾದ್, ಫೆ.7: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ವಿಶೇಷ ಕಾಯ್ದೆ ರೂಪಿಸಬೇಕು ಅಥವಾ ಪಾರ್ಲಿಮೆಂಟ್ ನ ಜಂಟಿ ಅಧಿವೇಶನವನ್ನು ಕರೆಯುವಂತೆ ವಿಶ್ವ ಹಿಂದೂ ಪರಿಷತ್ ನ ಸಾಧು , ಸಂತರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಸಂಗಮ ನದಿಯ ದಡದಲ್ಲಿ ಮೇಗಾ ಮೇಳ ಸಂದರ್ಭದಲ್ಲಿ ನಡೆದ ಸಮಾವೇಶದಲ್ಲಿ ಸರಕಾರವನ್ನು ಆಗ್ರಹಿಸಿರುವ ಸಂತರು ಉಜ್ಜೈನಿ ಕುಂಭದ ವೇಳೆ ನಡೆಯಲಿರುವ ಸಮಾವೇಶ ಬಳಿಕ ಮಂದಿರ ನಿರ್ಮಾಣದ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಂತರು ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಾಸುದೇವಾನಂದ ಸರಸ್ವತಿ ಮಾತನಾಡಿ" ಕೇಂದ್ರ ಸರಕಾರ ರಾಮಮಂದಿರ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆಯನ್ನು ಬಗೆ ಹರಿಸಲು ವಿಶೇಷ ನ್ಯಾಯ ಪೀಠ ಸ್ಥಾಪಿಸಬೇಕು. ಇದಕ್ಕಾಗಿ ಹೊಸ ಕಾಯ್ದೆ ರೂಪಿಸಬೇಕು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಎಚ್‌ಪಿಯ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು. ಮತ್ತು ಜೈಲುಗಳಲ್ಲಿ ಪಶುಪಾಲನೆಯನ್ನು ಕಡ್ಡಾಯಗೊಳಿಸುವಂತೆ ಸರಕಾರವನ್ನು ಆಗ್ರಹಿಸಿದರು.