ತಿರುವಣ್ಣಾಮಲೈ; ತೀರ್ಥ ಸ್ನಾನದ ವೇಳೆ ನೂಕುನುಗ್ಗಲು - 4 ಸಾವು
Update: 2016-02-08 22:36 IST
ತಿವರುವಣ್ಣಾಮಲೈ ,ಫೆ.8: ಇಲ್ಲಿನ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಕೆರೆಯಲ್ಲಿ ಮಹೋದಯಾ ಅಮವಾಸ್ಯೆಯ ಅಂಗವಾಗಿ ಇಂದು ಬೆಳಗ್ಗೆ ತೀರ್ಥಸ್ನಾನದ ವೇಳೆ ನೂಕುನುಗ್ಗಲು ಉಂಟಾಗಿ ನಾಲ್ವರು ಜಲಸಮಾಧಿಯಾಗಿದ್ದಾರೆ.
ದೇವಸ್ಥಾನದ ಕೆರೆ ‘ಅಯ್ಯನ್ ತೀರ್ಥಾವರಿ ಕುಳಂ’ನಲ್ಲಿ ತೀರ್ಥ ಸ್ನಾನ ಮಾಡಲು ಒಮ್ಮೆಲೆ ಎರಡು ಸಾವಿರ ಮಂದಿ ಪ್ರವೇಶಿಸಿದಾಗ ನೂಕು ನುಗ್ಗಲು ಉಂಟಾಗಿ ಪುಣ್ಯಕೋಟಿ, ವೆಂಕಟ್ರಮಣ, ಶಿವ ಮತ್ತು ಮಣಿಕಂಠ ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರವಿವಾರ ಮಧ್ಯರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ , ಮಹಾ ದೀಪಾರತಿ ಮುಗಿದ ಬಳಿಕ ಬೆಳಗ್ಗೆ ತೀರ್ಥಸ್ನಾನ ನಡೆಯುತ್ತಿದೆ. ಸಹಸ್ರಾರು ಮಂದಿ ದೇವಸ್ಥಾನದ ಕೊಳದಲ್ಲಿ ಮಿಂದು ಪುನೀತರಾಗುತ್ತಾರೆ ಆದರೆ ಈ ಬಾರಿ ನಡೆದ ದುರಂತದಿಂದಾಗಿ ಭಕ್ತಾಧಿಗಳ ಪುಣ್ಯಸ್ನಾನಕ್ಕೆ ತೊಂದರೆಯಾಗಿದೆ..