ಗಂಗೆಯಲ್ಲಿ ನೀರಿಲ್ಲ, ನೀವು ಹೇಗೆ ವಿದ್ಯುತ್ ಯೋಜನೆ ಮಂಜೂರು ಮಾಡಿದಿರಿ: ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಸುಪ್ರೀಂ
Update: 2016-02-09 12:57 IST
ಹೊಸದಿಲ್ಲಿ: ಗಂಗಾನದಿ ಅಲ್ಲಲ್ಲಿ ಒಣಗಿ ಹೋಗಿದೆ. ಆದರೆ ವಿದ್ಯುತ್ ಯೋಜನೆಯ ಕುರಿತು ಮಾತಾಡಲಾಗುತ್ತಿದೆ ಎಂದು ಕೇಂದ್ರಸರಕಾರವನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ. ಗಂಗಾನದಿ ಈಗ ಸಣ್ಣ ತೊರೆಯಂತೆ ಹರಿಯುತ್ತಿದೆ. ವಾಸ್ತವದಲ್ಲಿ ಕೇಂದ್ರಸರಕಾಗಂಗಾ ಬೇಸನ್ ಜಲವಿದ್ಯುತ್ ಯೋಜನೆಗೆ ಹೇಗೆ ಮಂಜೂರು ನೀಡಿತು ಎಂದು ಪ್ರಶ್ನಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿ ವಾತಾವರಣದತ್ತ ಗಮನ ನೀಡದೆ ವಿದ್ಯುತ್ ಯೋಜನೆಗೆ ಹಸಿರು ನಿಸಾನೆ ನೀಡಲಾಗಿದೆ ಎಂಬ ವಾದವನ್ನು ಪುಷ್ಠೀಕರಿಸುವಂತೆ ಸುಪ್ರೀಂ ಕೋರ್ಟ್ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಚೀಫ್ ಜಸ್ಟಿಸ್ ಟಿ.ಎಸ್.ಠಾಕೂರ್ ಅಧ್ಯಕ್ಷತೆಯ ಮೂವರು ಸದಸ್ಯರ ನ್ಯಾಯಾಧೀಶ ಪೀಠವು ಗಂಗಾ ಈ ಮೊದಲೇ ತುಂಡು ತುಂಡಾಗಿ ಹರಿಯುತ್ತಿದೆ. ಹೀಗಿರುವಾಗ ಇಲ್ಲಿ ವಿದ್ಯುತ್ ಯೋಜನೆ ಮಂಜೂರು ನೀಡಿದ್ದೇಕೆ? ಈ ಯೋಜನೆಯ ಪ್ರಯೋಜನ ಮತ್ತು ಅಡ್ಡಿ ಕುರಿತು ವ್ಯಾಪಕ ಚರ್ಚೆ ಆವಶ್ಯಕವಾಗಿದೆ ಎಂದು ಸೂಚಿಸಿದೆ.