ಡಿಡಿಸಿಎ ಹಗರಣ: ಕೀರ್ತಿ ಆಝಾದ್ ರಿಗೆ ಹೈಕೋರ್ಟ್ ನಲ್ಲಿ ಹಿನ್ನಡೆ!
ಹೊಸದಿಲ್ಲಿ: ದಿಲ್ಲಿಹೈಕೋರ್ಟ್ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿಯಿಂದ ಅಮಾನತಾಗಿರುವ ಸಂಸದ ಕೀರ್ತಿ ಆಝಾದ್‌ರ ಡಿಡಿಸಿಎ ಭ್ರಷ್ಟಾಚಾರ ಪ್ರಕರಣದ ಅರ್ಜಿಯನ್ನು ತಳ್ಳಿಹಾಕಿದೆ. ಕೀರ್ತಿ ಆಝಾದ್‌ರ ನಿಟ್ಟಿನಲ್ಲಿ ಇದು ಬಹುದೊಡ್ಡ ಹಿನ್ನಡೆಯೆಂದು ಉಲ್ಲೇಖಿಸಲಾಗುತ್ತಿದೆ.
ಕೀರ್ತಿ ಆಝಾದ್ ಮತ್ತು ಬಿಶನ್ ಸಿಂಗ್ ಬೇಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಡಿಡಿಸಿಎಯ ಭ್ರಷ್ಟಾಚಾರವನ್ನು ಎಸ್‌ಐಟಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ ಕೋರ್ಟ್ ಇಂದು ಅವರ ಅರ್ಜಿಯ ವಿಚಾರಣೆ ನಡೆಸಿ ರದ್ದು ಪಡಿಸಿದೆ. ಕೋರ್ಟ್ ಕೀರ್ತಿಹಾಗೂ ಬಿಶನ್ ಸಿಂಗ್ ಬೇಡಿಯ ಅರ್ಜಿ ಸೂಕ್ತವಲ್ಲವೆಂದು ಮನಗಂಡಿದ್ದು ಕೋರ್ಟ್ ಪ್ರಕಾರ ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಸಿಬಿಐ ಈಗಾಗಲೇ ಆರಂಭಿಸಿದೆ.
ಅಲ್ಲದೆ ಎಸ್‌ಐಟಿ ಯಿಂದ ಅಪೂರ್ವ ಘಟನೆಗಳಲ್ಲಿ ಮಾತ್ರ ತನಿಖೆ ನಡೆಸಲಾಗುತ್ತದೆ ಎಂದು ಅದು ತಿಳಿಸಿದೆ. ಕೀರ್ತಿ ಆಝಾದ್ ಕಳೆದ ಒಂಬತ್ತು ವರ್ಷಗಳಿಂದ ಡಿಡಿಸಿಎಯ ಭ್ರಷ್ಟಾಚಾರದ ಕುರಿತು ಆರೋಪಿಸುತ್ತ ಬಂದಿದ್ದಾರೆ. ಭ್ರಷ್ಟಾಚಾರಕ್ಕೆ ಜೇಟ್ಲಿ ಕಾರಣವೆಂದು ಅವರು ಹೇಳುತ್ತಿದ್ದಾರೆ.