×
Ad

ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಸಿದ್ಧರಿಲ್ಲದ ಸಚಿವರು ಶಾಸಕರು ಅಧಿಕಾರಿಗಳು!

Update: 2016-02-11 18:16 IST

ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸರಕಾರ

 ಲಕ್ನೋ: ಉತ್ತರ ಪ್ರದೇಶದ ಸಚಿವರು, ಶಾಸಕರು, ಅಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಕಲಿಸಲು ಸಿದ್ದರಿಲ್ಲ. ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಮೂಲಶಿಕ್ಷಣದಲ್ಲಿ( ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲ್ಲಿ) ಸುಧಾರಣೆ ತರಲಿಕ್ಕಾಗಿ ಎಲ್ಲ ಸರಕಾರಿ ಅಧಿಕಾರಿಗಳು-ಉದ್ಯೋಗಿಗಳು, ರಾಜಕಾರಣಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಯಲ್ಲಿ ಕಲಿಸಬೇಕೆಂದು ಆದೇಶ ನೀಡಿತ್ತು. ಇದೀಗ ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಆದೇಶದ ವಿರುದ್ಧ ವಿಶೇಷ ಅನುಮತಿ ಅರ್ಜಿ(ಎಸ್‌ಎಲ್‌ಪಿ) ಸಲ್ಲಿಸಲು ನಿರ್ಧರಿಸಿದೆ ಸರಕಾರದ ಸೂಚನೆಯಂತೆ ಮೂಲಭೂತ ಶಿಕ್ಷಣ ವಿಭಾಗವು ಎಸ್‌ಎಲ್‌ಪಿ ದಾಖಲಿಸಲು ಸಿದ್ಧವಾಗಿದೆ. ಕಳೆದ ಆಗಸ್ಟ್ 18ರಂದು ಅಲಾಹಾಬಾದ್ ಹೈಕೋರ್ಟ್ ಪ್ರಾಥಮಿಕ ಶಿಕ್ಷಣದ ಮಟ್ಟದಲ್ಲಿ ಸುಧಾರಣೆಗಾಗಿ ಸರಕಾರಿ ಅಧಿಕಾರಿಗಳು-ಸಚಿವರು ನೌಕರರು ಹಾಗೂ ಶಾಸಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಆದೇಶ ನೀಡಿತ್ತು. ಆರು ತಿಂಗಳ ನಂತರವೂ ಸರಕಾರ ಹೈಕೋರ್ಟ್ ಆದೇಶವನ್ನು ಜಾರಿಗೆ ತರುವ ಕುರಿತು ಹೆಜ್ಜೆ ಮುಂದಿರಿಸಿಲ್ಲ. ಯಾಕೆಂದರೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಅದಕ್ಕೆ ಇಷ್ಟವಿಲ್ಲ.

ರಾಷ್ಟ್ರೀಯ ಲೋಕದಳದ ಶಾಸಕ ಸುದೇಶ್ ಶರ್ವ ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ಕೇಳಿದ್ದರು. ಹೈಕೋರ್ಟ್ ಆದೇಶದ ವಿರುದ್ಧ ನ್ಯಾಯ ವಿಭಾಗ ಪರಾಮರ್ಶೆ ನಡೆಸುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸುವ ಕುರಿತು ನಿರ್ಧರಿಸಲಾಗಿದೆ. ಎಂದು ಲಿಖಿತ ಉತ್ತರ ನೀಡಲಾಗಿತ್ತು.

ಆದರೆ ಪ್ರಾಥಮಿಕ ಶಿಕ್ಷಣ ವಿಭಾಗದ ಅಧಿಕಾರಿಗಳು ಎಸ್ ಎಲ್ ಪಿ ದಾಖಲಿಸುವ ಕುರಿತು ಇನ್ನಷ್ಟೇ ತೀರ್ಮಾನಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಸಚಿವ ಆಶಿಷ್ ಗೋಯಲ್ ರನ್ನು ಕೇಳಿದಾಗ ಈ ವಿಚಾರದಲ್ಲಿ ಈಗಷ್ಟೆ ವಿಚಾರ ವಿಮರ್ಶೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News