ಮುಂಬೈ ಯುವನಟಿ ರುಕ್ಸಾರ್‌ಳ ಸಾವು. ಅತ್ಯಾಚಾರ ಶಂಕೆ!
ಬಾಲಿವುಡ್‌ನ 21ವರ್ಷ ವಯಸ್ಸಿನ ನಟಿಯೊಬ್ಬಳ ಸಾವು ಕೋಲಾಹಲಕ್ಕೆ ಕಾರಣವಾಗಿದೆ. ರಾತ್ರಿಯ ಪಾರ್ಟಿ ಮುಗಿಸಿ ತನ್ನ ಗೆಳೆತಿಯ ಮನೆಗೆ ಹೋಗಿದ್ದ ನಟಿ ಬೆಳಗೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಮುಂಬೈಯ ರುಕ್ಸರ್ ಖಾನ್ ಜೂನಿಯರ್ ಆರ್ಟಿಸ್ಟ್ ಆಗಿದ್ದಳು. ಸಣ್ಣಪುಟ್ಟ ಪಾತ್ರಗಳಲ್ಲಿ ಸಿನೆಮಾದಲ್ಲಿ ಅಭಿನಯಿಸಿದ್ದ ಅವಳು ತನ್ನ ಗೆಳೆಯರಾದ ಪಾಯಲ್ ಬಂಜಾರ, ತೌಹೀದ್ ಅಹ್ಮದ್ ಮತ್ತು ಸಮೀರ್‌ರ ಜೊತೆ ತಡರಾತ್ರಿವರೆಗೂ ಪಾರ್ಟಿ ನಡೆಸಿದ್ದಾಳೆ. ಆನಂತರ ಪಾಯಲ್‌ಳ ಜೊತೆ ರಾತ್ರಿ ವೇಳೆ ಉಳಿದುಕೊಂಡಿದ್ದಳು. ಪಾಯಲ್ ಬೆಳಗ್ಗೆ ಏಳುವಾಗ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ರುಕ್ಸಾರ್ ನಿದ್ರಿಸುತ್ತಿದ್ದಾಳೆಂದು ಭಾವಿಸಿ ಅವಳು ವೈದ್ಯರ ಬಳಿಗೆ ಹೋಗಿದ್ದಳು. ಅಲ್ಲಿಂದ ಅವಳು ರುಕ್ಸಾರ್‌ಳಿಗೆ ಫೋನ್ ಮಾಡಿದಾಗ ರುಕ್ಸಾರ್ ಫೋನೆತ್ತಿಕೊಳ್ಳಲಿಲ್ಲ. ಆನಂತರ ಅವಳು ಮನೆಗೆ ಬಂದು ರುಕ್ಸಾರ್‌ಳನ್ನು ಎಬ್ಬಿಸಲು ನೋಡಿದಾಗ ರುಕ್ಸಾರ್ ಬೆಡ್‌ನಲ್ಲಿ ಮೃತಳಾಗಿರುವುದು ಕಂಡು ಬಂದಿತ್ತು.
ಪೊಲೀಸರು ಡ್ರಗ್ಸ್‌ನ ಓವರ್ ಡೋಸ್‌ನಿಂದ ರುಕ್ಸಾಳ್‌ಳ ಪ್ರಾಣ ಹೋಗಿದೆ ಎನ್ನುತ್ತಿದ್ದಾರೆ. ಆದರೆ ಅವಳ ಕುಟುಂಬದವರು ಪೊಲೀಸರ ಮಾತನ್ನು ಒಪ್ಪಲು ಸಿದ್ಧರಿಲ್ಲ. ರುಕ್ಸಾರ್‌ಳಿಗೆ ನಿಕಟವಾಗಿದ್ದವರು ಅವಳಿಗೆ ಮಾದಕವಸ್ತು ಸೇವಿಸುವ ಚಟವಿರಲಿಲ್ಲ ಎಂದಿದ್ದಾರೆ. ಅವಳಿಗೆ ಬಲಾತ್ಕಾರವಾಗಿ ಅದನ್ನು ನೀಡಿ ಅತ್ಯಾಚಾರವೆಸಗಲಾಗಿದೆ ಎಂದು ಮನೆಯವರು ದೂರಿದ್ದಾರೆ. ತನಿಖೆ ಮುಂದುವರಿಯುತ್ತಿದೆ.